WhatsApp Image 2024-06-20 at 6.19.22 PM

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ 54 ನೇ ಜನ್ಮದಿನ ಶುಭ ಹಾರೈಕೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 20- ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜೀಲ್ ನಲ್ಲಿ ಲೋಕಸಭಾ ಸಂಸದ್ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಅವರ 54ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿದ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸಾಕ್ಷರತಾ ಸದಸ್ಯ ಜನಾಭಿಪ್ರಾಯ ಮುಖಂಡ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಅವರು ಮಾತನಾಡಿದರು.

ಲೋಕಸಭಾ ಸಂಸದ್ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ದ್ವೇಷದ ವಿರುದ್ಧ ನಿಂತು ಪ್ರೀತಿ ಹಂಚಿದ ನಾಯಕ ದೇಶದ ಸಂವಿಧಾನ ಮೌಲ್ಯಗಳಿಗೆ ಬದ್ಧರಾಗಿರುವ ನೀತಿ ಮತ್ತು ಬಡವರ ಧ್ವನಿಯಾಗಿರುವ ನಡೆಯೇ ಎಲ್ಲರಿಗಿಂತ ವಿಭಿನ್ನ ಎನ್ನುವ ಸಾಲಿನಲ್ಲಿ ನಿಲ್ಲಿಸಿದೆ ಜಗತ್ತಿನ ಬಗ್ಗೆ ಅನನ್ಯ ದೃಷ್ಟಿಕೋನ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಪರಮದಯಾನು ಕರುಣಾ ನಿಧಿಯೂ ಆದ ಅಲ್ಲಾಹ ರಸೂಲರ ಜಗದ್ಗುರುಗಳ ಹಿರಿಯರ ಕೃಪಾ ಆಶೀರ್ವಾದ ಸದಾ ಇರಲಿ ಮತ್ತು ರಾಹುಲ್ ಗಾಂಧಿ ಅವರ ಆರೋಗ್ಯ ಆಯುಷ್ಯ ಕರುಣಿಸಲಿ ಜಾಗತಿಕವಾಗಿ ಹಾಗೂ ದೇಶದ ಸಾರ್ವಜನಿಕರ ಸೇವೆ ಮಾಡುವ ಕಲ್ಪಿಸಲಿ ಈ ಶುಭದಿನದ ಪುನರಾಗಮನ ವಾಗಲಿ ಎಂದು ಅಬ್ದುಲ್ ನಬಿ ಅವರು ಶುಭ ಹಾರೈಸಿದರು ಮಕ್ಕಳಿಗೆ ಸಿಹಿ ಹಂಚಿದರು .

ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ಬಳ್ಳಾರಿ ಮಹಾನಗರದ ಮದರ್ ಥೆರೇಸಾ ಅನಾತ ಆಶ್ರಮದಲ್ಲಿರುವ ವಾಸಿಗಳಾದ ವಿಕಲ ಚೇತನ ಮಕ್ಕಳಿಗೆ ಮತ್ತು ವೃದ್ಧರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ನೂತನ ಕಾಂಗ್ರೆಸ್ ಸಂಸದ್ ಈ ತುಕಾರಾಂ ರಾಹುಲ್ ಗಾಂಧಿ ಯುವ ಬ್ರಿಗೇಡ್ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಅಖಿಲ್ ಅಹಮದ್ ಅವರ ನೇತೃತ್ವದಲ್ಲಿ ಅನ್ನ ಸಂತರ್ಪಣೆದೊಂದಿಗೆ ಹಣ್ಣು ಹಂಪಲನ್ನು ವಿತರಿಸಲಾಯಿತು ಬಳ್ಳಾರಿ ನಗರಾಭಿವೃದ್ಧಿ ಬುಡ ಅಧ್ಯಕ್ಷರು ಜೆ ಎಸ್ ಆಂಜನೇಯಲು ರಾಜ್ಯ ಕಾರ್ಮಿಕ ಕಾಂಗ್ರೆಸ್ ಘಟಕದ ರಾಜ್ಯ ಕಾರ್ಯದರ್ಶಿ ಕಾಂಡ್ರಾ ಸತೀಶ್ ಕುಮಾರ್ ವಿಧಾನ ಪರಿಷತ್ ಮಾಜಿ ಶಾಸಕ ಕೆ ಎಸ್ ಎಲ್ ಸ್ವಾಮಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಕಣೆಕಲ್ ಮಾಬುಸಾಬ್ ಗುಡ್ಲು ರವಿ ಸಂತೋಷ್ ರಘು ಇದ್ದರು.

Leave a Reply

Your email address will not be published. Required fields are marked *

error: Content is protected !!