
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೨೭- ಸುಳ್ಳು ಆಶ್ವಾಸನೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ಸ್ವಲ್ಪವಾದರೂ ಕಾಳಜಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಬಿಜೆಪಿ ಮುಖಂಡ ಆರ್ ಅಶೋಕ್ಆರೋಪಿಸಿದರು.
ಅವರು ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಡೂರು ತಾಲೂಕ, ಮರುಟ್ಲಾ, ವಿಠಲಾಪುರ, ಅಂತಾಪುರ, ಬನ್ನಿಹಟ್ಟಿ ಬ ರಪ್ರದೇಶದ, ರೈತರ ಜಮೀನುಗಳನ್ನು ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ಕಾಂಗ್ರೆಸ್ ಸರ್ಕಾರ ರೈತರೂ ಸಂಕಷ್ಟದಲ್ಲಿ ಇರುವುದನ್ನೇ ಮರೆತು ಕೇಸುಗಳನ್ನು ಹಿಂಪಡೆಯುವಲ್ಲಿ ತೊಡಗಿದೆ ಎಂದು ಟೀಕಿಸಿದರು.
ಹಿಂದೆ ಬಿಜೆಪಿ ಇದ್ದ ಸಂದರ್ಭದಲ್ಲಿ ಉತ್ತಮ ಮಳೆಯಾಗಿತ್ತು ಕೆರೆಗಳು ತುಂಬಿದ್ದವು ಇಂದು ಮಳೆ ಇಲ್ಲ ಬರ ಬಂದು ಅಂತರ್ಜಲ ಬತ್ತಿ ಹೋಗಿದೆ. ರಾಜ್ಯ ಸರ್ಕಾರವು ಇಲ್ಲಿಯವರೆಗೆ ಯಾವುದೇ ನಯಾ ಪೈಸೆ ಬರ ಪರಿಹಾರವನ್ನು ನೀಡಿಲ್ಲ. ಉಸ್ತುವಾರಿ ಸಚಿವರು ಇತ್ತ ಕಡೆ ತಿರುಗಿ ನೋಡುತ್ತಿಲ್ಲ ಎಂದರು. ಅಲ್ಲದೆ ಕಾಂಗ್ರೆಸ್ ಪಕ್ಷದವರು ಕೇವಲ ಕೇಂದ್ರ ಸರ್ಕಾರದ ಮೇಲೆ ಹಾಕುವುದು ಏಕೆ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲದೆ ಇದ್ದರೆ ಕೂಡಲೇ ಘೋಷಿಸಲಿ.
ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ರಕ್ಷಣೆ ಮಾಡಬೇಕು ಮತ್ತು ಬರ ಪರಿಹಾರವನ್ನು ಕೂಡಲೇ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರೋಧಪಕ್ಷ ನಾಯಕ ಅಶೋಕ್ ಅವರು ಈಗಾಗಲೇ ಒಬ್ಬರನ್ನೇ ಕೇಸಿನಿಂದ ಮುಕ್ತಗೊಳಿಸುತ್ತಿದ್ದಾರೆ. ಅದರಲ್ಲಿಯೇ ಮುಳುಗಿದ್ದ ಇದ್ದಾರೆ.
ಅದೇ ರೀತಿಯಾಗಿ ನಾಗೇಂದ್ರ ಅವರ ಮೇಲೆ ನೂರಾರು ಕೇಸುಗಳಿವೆ ಅವುಗಳನ್ನು ಸಹ ಮುಕ್ತ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇಂಥವರಿಗೆ ರೈತರು ಏಕೆ ಬೇಕು ಅವರ ಸಮಸ್ಯೆ ಯಾಕ ಬೇಕು ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ, ಕರಡಿ ಸಂಗಣ್ಣ, ಬಿಜೆಪಿ ಅಧ್ಯಕ್ಷ ಮುರಾರಿ ಗೌಡ, ಪುರುಷೋತ್ತಮ ಶಂಕ್ರಪ್ಪ ತಾಲೂಕ ಅಧ್ಯಕ್ಷ ಜೆ ಟಿ ಪಂಪಾಪತಿ, ಸೆಲ್ಲ ಆಯ್ತು ಮೋರ್ಚಾ ಅಧ್ಯಕ್ಷ ತಾಲೂಕ ರೈತ ಮುಖಂಡ ಕೆನ್ನೂರೇಶ್ವರ ಇತರ ಹಲವಾರು ಗ್ರಾಮಗಳಿಂದ ಬಂದ ರೈತರು ಉಪಸ್ಥಿತರಿದ್ದರು. ತಾಲೂಕ ಕೃಷಿ ಅಧಿಕಾರಿ ಮಂಜುನಾಥ್ ರೆಡ್ಡಿ, ತಾಸಿಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕೃಷಿ ಅಧಿಕಾರಿ ತೋಟಗಾರಿಕೆ ಇಲಾಖೆ ಅಧಿಕಾರಿ ಹನುಮಂತ ನಾಯಕ ಇದ್ದರು.