WhatsApp Image 2024-02-29 at 5.44.02 PM

ಕಾರ್ಮಿಕರಿಗೆ ಉಪಯೋಗವಿಲ್ಲದ, ಆರೋಗ್ಯ ತಪಾಸಣೆ ಕೂಡಲೇ ನಿಲ್ಲಿಸಲು ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,29- ಉಚಿತ ಆರೋಗ್ಯ ತಪಾಸಣೆ ಹೆಸರಲ್ಲಿ ಕಾರ್ಮಿಕರಿಗೆ ಉಪಯೋಗವಿಲ್ಲದ ಕಾಟಾಚಾರದ ಆರೋಗ್ಯ ತಪಾಸನೆ ಶಿಬಿರವನ್ನು ಕೂಡಲೇ ನಿಲ್ಲಿಸಬೇಕೆಂದು  ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಒಕ್ಕೂಟ ಎಂದು ಜಿಲ್ಲಾ ಸಹಾಯಾಧಿಕಾರಿಗಳು, ಮಹಮ್ಮದ್ ಜುಬೇರ, ಮತ್ತು ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಬಿ ರಾಮಾಂಜನೇಯ ಮಾತನಾಡುತ್ತಾ, ಕಾರ್ಮಿಕರ ಹಿತರಕ್ಷಣಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರವು ಕೇವಲ ಕಾಟಾಚಾರಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಇದರಿಂದ ಯಾರಿಗೂ ಉಪಯೋಗವಿಲ್ಲ ವೆಂದರು. ಕಟ್ಟಡ ಕಾರ್ಮಿಕರಿಗೆ ಅಧಿಕಾರಿಗಳು ಅಡಿಗೆ ಎಣ್ಣೆ ಮತ್ತು ತೊಗರಿ ಬೇಳೆ ಇವುಗಳನ್ನು ಕೊಟ್ಟು ಅಮಿಷ ಒಡ್ಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ಆಗ್ರಹ ವ್ಯಕ್ತ ಮಾಡಿದರು.

ಸರ್ಕಾರದಲ್ಲಿ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ, ಆರೋಗ್ಯ ಚಿಕಿತ್ಸೆ ಧನ ಸಹಾಯ, ಶಿಶು ಪಾಲನಾ ಕೇಂದ್ರ ಸಾಲಗಳನ್ನು ನಡೆಸಲು ಹಣವಿಲ್ಲ ಎಂದು ಶಿಶುಪಾಲನ ಕೇಂದ್ರಗಳನ್ನು ಮುಚ್ಚಲಾಗಿದೆ ಆದರೆ ಇಂಥ ವ್ಯರ್ಥ ಕಾರ್ಯಕ್ರಮಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗುತ್ತದೆ ಎಂದರು, ಇದು ಯಾರ ಲಾಭಕ್ಕೆ ಎಂದು ತಮಗೆ ಮಾತ್ರ ತಿಳಿಯುತ್ತಿಲ್ಲ ಎಂದರು.

ಈ ಕೂಡಲೇ ಸರ್ಕಾರ ಉಚಿತ ಆರೋಗ್ಯ ತಪಾಸಣೆ ವಾಹನ ಮತ್ತು ಆರೋಗ್ಯ ತಪಾಸನೆ ಶಿಬಿರ ನಡೆಸುವ ಕಾರ್ಯಕ್ರಮವನ್ನು ನಿಲ್ಲಿಸಿ, ಕಾರ್ಮಿಕರ ಹಿತರಕ್ಷಣಗಾಗಿ ಉಪಯೋಗವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿದರು ಇದರ ಬದಲಾಗಿ ಬಳ್ಳಾರಿ ನಗರದಲ್ಲಿ 5 ಆಸ್ಪತ್ರೆಗಳಿಗೆ ಮಾತ್ರ ಚಿಕಿತ್ಸಾ ಧನ ಸಹಾಯ ಪಡೆಯಲು ಅವಕಾಶ ಕೊಟ್ಟಿದ್ದು ಇದನ್ನು ಇನ್ನೂ 10 ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಿ ಅವಕಾಶ ಮಾಡಿಕೊಟ್ಟರೆ ಅವರು ಚಿಕಿತ್ಸೆ ಪಡೆಯಬಹುದು ಎಂದರು.

ಇದರಿಂದ ಕಾರ್ಮಿಕರಿಗೆ ಉಪಯೋಗವಾಗುತ್ತದೆ. ಮೇಲಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಳಸ್ ತಾಯಿ ಗಳಿಗೆ ಅದೇಶ ನೀಡಲು ಒತ್ತಾಯಿಸಲಾಗುತ್ತದೆ ಎಂದರು. ಬಳ್ಳಾರಿಯಲಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ತಿಳಿಸಿದರು ಏನು ಉಪಯೋಗವಾಗುತ್ತಿಲ್ಲ ಎಂದರು.

ತಮ್ಮ ಒಕ್ಕೂಟದ ನೇತೃತ್ವದಿಂದ ಹಲವಾರು ಬಾರಿ ಪ್ರತಿ ಘಟನೆಗಳು ನಡೆಸಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಎಷ್ಟು ಮನವಿ ಪತ್ರ ಸಲ್ಲಿಸಿದರು ಕಾರ್ಮಿಕರ ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಮಾಡಿದರು.

ಇದೇ ರೀತಿ ಸರ್ಕಾರದ ಪರಿಸ್ಥಿತಿ ಮುಂದುವರೆದರೆ, ತಾವುಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ನಿಜಲಿಂಗಯ್ಯ, B,ರಾಮಂಜಿನಯ ಶಿವನಾಯ್ಕ,ನಾರಾಯಣ ನಾಯ್ಕ್,ಮರೆಣ್ಣ,ನರಸಪ್ಪ, ಹುಲುಗಪ್ಪ,ಶಂಕರ್, ಇ. ರಾಮು ಇತರ ಕಾರ್ಮಿಕ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!