
ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳ ಬಲ : ಹಾಜಿ ಹುಸೇನ್ ಸಾಬ್ ಯಾದವಾಡ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ಜಗತ್ತಿನಲ್ಲಿ ಕಾರ್ಮಿಕ ವರ್ಗ ಇರದಿದ್ದರೆ ಅಭಿವೃದ್ಧಿ ಅಸಾಧ್ಯ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಹಿರಿದು ಪ್ರತಿ ವರ್ಷ ಮೇ ತಿಂಗಳ ಮೊದಲ ದಿನವನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿದೆ ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸೌಲಭ್ಯ ಪಡೆಯುವುದು ಹೇಗೆ ಎಂಬುದು ಸಮಗ್ರ ಕಾರ್ಮಿಕರ ಕಲ್ಯಾಣಕ್ಕೆ ಯೋಜನೆಗಳ ಬಲ ಎಂದು ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯ ದಂಡಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕ ಕಾನೂನು ಸೇವೆಗಳ ಸಮಿತಿಯ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಅಭಿಪ್ರಾಯಪಟ್ಟರು.
ನಗರದ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಸಹಭಾಗಿತ್ವದಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಸಿಗೆ ನೀರು ಹಾಕುವ ಮೂಲಕ ಅವರು ಉದ್ಘಾಟಿಸಿದರು ಸಂಪನ್ಮೂಲ ವ್ಯಕ್ತಿಗಳಾದ ಪ್ಯಾನಲ್ ವಕೀಲರಾದ ಎನ್ ಅಬ್ದುಲ್ ಸಾಬ್ ರಾರಾವಿ ಅವರು ಮಾತನಾಡಿ 1ಮೇ 1886 ರಲ್ಲಿ ದಿನದ 15 ಗಂಟೆ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂದು ಬೇಡಿಕೆಯೊಂದಿಗೆ ಕಾರ್ಮಿಕರು ಅಮೆರಿಕಾದ ಚಿಕಾಗೋ ನಗರದಲ್ಲಿ ಪ್ರತಿಭಟನೆಗೆ ಮುಂದಾದರು.
ಈ ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಮೇ 4ರಂದು ಪೊಲೀಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು ಪ್ರತಿ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ ಆಚರಿಸಬೇಕೆನ್ನುವ ಬೇಡಿಕೆ ಕೊನೆಗೆ ಈಡೇರಿತು 1916ರಲ್ಲಿ ಅಮೆರಿಕಾ ಸರ್ಕಾರವು ಕೆಲಸದ ಅವಧಿಯನ್ನು ಕಡಿಮೆಗೊಳಿಸಿ ಎಂಟು ಗಂಟೆಗಳ ಕೆಲಸ ಅವಧಿ ಹಾಗೂ ಕಾರ್ಮಿಕರ ದಿನವನ್ನಾಗಿ ಆಚರಿಸುವುದಕ್ಕೆ ಮುಂದಾಯಿತು ಅಂದಿನಿಂದ ಪ್ರತಿ ವರ್ಷ ಮೇ 1ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ 1923ನೇ ಇಸವಿಯ ಮೇ 1ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ವಿವಿಧ ದೇಶಗಳ ಕುರಿತು ಸರ್ವರನ್ನು ಉದ್ದೇಶಿಸಿ ಅವರು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಸರಕಾರಿ ಅಭಿಯೋಜಕಿ ಶಾರದಾ, ವಕೀಲರ ಸಂಘದ ಕಾರ್ಯದರ್ಶಿ ಹೆಚ್ ಪ್ಯಾಟೇ ಗೌಡ, ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ ಅಧ್ಯಕ್ಷತೆ ವಹಿಸಿದ್ದರು, ಪ್ಯಾನಲ್ ವಕೀಲರಾದ ಮಲ್ಲಿಗೌಡ ಅವರು ಕಾರ್ಯಕ್ರಮ ನಿರೂಪಿಸಿದರು ಪ್ಯಾನೆಲ್ ವಕೀಲರಾದ ವೆಂಕಟೇಶ್ ನಾಯಕ ಅವರು ಪ್ರಾರ್ಥಿಸಿದರು ಪ್ಯಾನಲ್ ವಕೀಲರಾದ ಎಚ್ ಕೆ ರಾಮಪ್ಪ ಸರ್ವರನ್ನು ಸ್ವಾಗತ ಬಯಸಿದರು ಪ್ಯಾನಲ್ ವಕೀಲರಾದ ಕೆ ಸಣ್ಣ ಹುಸೇನ್ ವಂದನಾರ್ಪಣೆ ಮಾಡಿದರು.