
ಕೊಪ್ಪಳ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜ
ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿದ್ಯಾಧರ ಮೇಘರಾಜಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭ ಕೊಪ್ಪಳ ತಾಲೂಕಿನ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಗಣಿತ ಉಪನ್ಯಾಸಕರಾದ ವಿದ್ಯಾಧರ ಮೇಘರಾಜ ಅವರು ಕೊಪ್ಪಳ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಅವರನ್ನು ಭಾನುವಾರ ಭಾಗ್ಯನಗರದ ಅವರ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ನಿವೃತ್ತ ಉಪನ್ಯಾಸಕರಾದ ಶಂಭುಲಿAಗಪ್ಪ ಹರಗೇರಿ, ಹಿರಿಯರಾದ ಶ್ರೀರಾಮಚಂದ್ರಸಾ ಮೇಘರಾಜ, ನಾಗರತ್ನಬಾಯಿ ಮೇಘರಾಜ, ಸೋನಾ ವಿ. ಮೇಘರಾಜ, ಶ್ರೀಧರಸಾ ಮೇಘರಾಜ, ಶೋಭಾ ಎಸ್. ಮೇಘರಾಜ, ದೀಪ್ತಿ, ಸಾಯಿಅಥರ್ವ, ಸಾಯಿಧನುಷ್, ಪೃಥ್ವಿರಾಜ, ಶ್ರೀರಕ್ಷಾ ಉಪಸ್ಥಿತರಿದ್ದರು.
ಕೊಪ್ಪಳ ತಾಲೂಕಿನ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಗಣಿತ ಉಪನ್ಯಾಸಕರಾದ ವಿದ್ಯಾಧರ ಮೇಘರಾಜ ಅವರು ಕೊಪ್ಪಳ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಅವರನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿ
ತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸನ್ಮಾನಿಸಿದರು.