
ಅಂಬೇಡ್ಕರ್ ಪ್ರತಿಮೆಗೆ ಅವಮಾನ
ಕಿಡಿಗೇಡಿಗಳನ್ನು ಬಂದಿಸಲು ಜಿಲ್ಲಾಧಿಕಾರಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ) : ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಹೊಸಪೇಟೆ ವತಿಯಿಂದ ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವಂತ ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಕೆಲವು ಕಿಡಿಗೇಡಿಗಳು ರಾಜ್ಯ ದ್ರೋಹಿ ದುಷ್ಕರ್ಮಿಗಳು ಸೇರಿಕೊಂಡು ದಿನಾಂಕ 7.1.2024 ರಂದು ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿ ವಿಕೃತಿ ಎಸಗಿದ್ದರ ವಿರುದ್ದ ಕಿಡಿಗೇಡಿಗಳನ್ನು ಬಂದಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಂಕರ್ ನಂದಿಹಾಳ ಅವರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ್ದನ್ನು ನೋಡಿದರೆ ಬರಿ ದಲಿತ ವರ್ಗಕ್ಕೆ ಅವಮಾನ ಮಾಡಿದಂತಲ್ಲ, ಇಡೀ ಭಾರತ ದೇಶದ ನಾಗರಿಕರಿಗೆ ಅವಮಾನ ಮಾಡಿ ಮನಕುಲವೇ ತಲೆತಗ್ಗಿಸಿದಂತಾಗಿದೆ. ಏಕೆಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೊಡ್ಡ ದೇಶಕ್ಕೆ ಶ್ರೇಷ್ಠವಾದ ಸಂವಿಧಾನದಿಂದ ಎಲ್ಲಾ ಜಾತಿಗಳು, ಧರ್ಮದ ನಾಗರಿಕರು ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುವಂತೆ ಕೆಲಸ ಮಾಡಿದ್ದಾರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಉಗ್ರ ಶಿಕ್ಷೆಯನ್ನು ವಿಧಿಸಿ ಗಡಿಪಾರು ಮಾಡಬೇಕೆಂದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹೊಸಪೇಟೆ ತಾಲೂಕ ಸಮಿತಿ ಅಧ್ಯಕ್ಷರಾದ ಸಿ. ರಮೇಶ್ ಅವರು ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವಂತ ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಕೆಲವು ಕಿಡಿಗೇಡಿಗಳು ರಾಜ್ಯ ದ್ರೋಹಿ ದುಷ್ಕರ್ಮಿಗಳು ಸೇರಿಕೊಂಡು ದಿನಾಂಕ 7.1.2024 ರಂದು ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ ಮಾಡಿ ವಿಕೃತಿ ಎಸಗಿದ್ದರ ವಿರುದ್ದ ಕಾನೂನು ಕ್ರಮ ಕೈಗೊಂಡು, ಸಂಭಂದ ಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಸೂಕ್ತ ಕ್ರಮ ಜರುಗಿಸಬೇಕು. ಎಲ್ಲೆಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ, ರಾಷ್ಟ್ರ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳಿವೆಯೋ ಅಲ್ಲೆಲ್ಲಾ ಬಿಗಿ ಬಂದೋಬಸ್ತ್ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕ ಅಧ್ಯಕ್ಷರು ಹೊಸಪೇಟೆ ಕರ್ನಾಟಕ ದಲಿತ ರಕ್ಷಣಾವೇದಿಕೆ. ಏ ಗೋವಿಂದ ತಾಲೂಕ ಗೌರವಾಧ್ಯಕ್ಷರು. ವಿ ನಾಗರಾಜ್‌ತಾಲೂಕ ಪ್ರಧಾನ ಕಾರ್ಯದರ್ಶಿ. ಮುಸ್ತಫ ಹುಸೇನ್ ಕಾಂಗ್ರೆಸ್‌ಮುಖಂಡರು. ಮಹಮ್ಮದ್ ಮುಸ್ತಫ ಹಸೇನ್ ಕಾಂಗ್ರೆಸ್ ಮುಖಂಡರು. ಶರೀಫ್ ಅಧ್ಯಕ್ಷರು ಕಾರ್ಮಿಕ ಹಕ್ಕುಗಳ ವೇದಿಕೆ ಶ್ರೀನಿವಾಸ್ ಚಲವಾದಿ ನಗರ ಘಟಕ ಉಪಾಧ್ಯಕ್ಷರು. ನೀಲಕಂಠ ಚಲವಾದಿ.ಹನುಮಂತ ಸಿ ಅಮರೇಶ ಸಿ ದೇವರಾಜ ಸಿ ರಾಮ ಇನ್ನಿತರರಿದ್ದರು.