
ರಸ್ತೆ ಅಪಘಾತ ಬೈಕ್ ಸವಾರ ಸಾವು
ಕರುನಾಡ ಬೆಳಗು ಸುದ್ದಿ
ಕುಕನೂರ, ೧೬- ಕೆ.ಎಸ್.ಆರ್.ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭಾರಿ ಅಪಘಾತ ನಡೆದಿದ್ದು, ಈ ಪರಿಣಾಮವಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಪಟ್ಟಣದ ಕುಕನೂರು ಬಸ್ ಡಿಪೋ ಹತ್ತಿರ ಗುದ್ನೇಪ್ಪನ ಮಠದಿಂದ ಕುಕನೂರು ಕಡೆಗೆ ಬೈಕ್ ಸವಾರ ಹೋಗುತ್ತಿದ್ದ ಈ ವೇಳೆ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದ್ದು, ಆಂಬುಲೆನ್ಸ್ ಕರೆಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ನಿರುಪಾದಿ ಮುದಿಯಪ್ಪ ಟೆಂಗುಂಟಿ (17 ವರ್ಷ) ಎಂದು ಗುರುತಿಸಲಾಗಿದೆ. ನಿರುಪಾದಿ ಪ್ರಥಮ ಪಿಯುಸಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಕನೂರಿನಲ್ಲಿ ಓದುತ್ತಿದ್ದನು. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.