
ನ.11 ರಂದು ಓಬವ್ವ ಜಯಂತಿ – ಕುಲಕರ್ಣಿ
ಕರುನಾಡ ಬೆಳಗು ಸುದ್ದಿ
ಕುಕನೂರ, 08- ನಗರದಲ್ಲಿ ನ ,೧೧ ರಂದು ತಾಲೂಕು ಆಡಳಿತ ದಿಂದ ವೀರರಾಣಿ ಒನಕೆ ಓಬವ್ವ ಜಯಂತಿಯನ್ನು ಸರಳ ಮತ್ತು ಅರ್ಥ ಪೂರ್ಣ ವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಂದು ಗ್ರೇಡ -2 ತಹಸೀಲ್ದಾರ್ ಮುರುಳಿಧರ್ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಚೇರಿಯಲ್ಲಿ ಓಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸರಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲಿ, ಒನಕೆ ಓಬವ್ವ ಸಮಾಜದ ಮುಖಂಡರುಗಳಾದ ಸಣ್ಣ ಯಲ್ಲಪ್ಪ ಕಲ್ಮನಿ, ರಾಮಣ್ಣ ಬಂಕದ ಮನಿ , ಕಲ್ಮನಿ , ಶರಣಪ್ಪ ಘಾಟಿ, ಗವಿ ಶೆಲೋಡಿ, ರಾಘು ಕಾತರಕಿ, ಹನುಮಂತಪ್ಪ ಚಕ್ಕಲಿ, ಹೆಗ್ಗಪ್ಪ ಸಾಲ್ಮನಿ, ರಮೇಶ್ ಮಳೆ ಕೊಪ್ಪ, ಬಸವರಾಜ್ ಶೆಲೂಡಿ, ಮುದಿಯಪ್ಪ ಕಾಳಿ, ನಾಗಪ್ಪ ಕಲ್ಮನಿ, ಜುಂಜಪ್ಪ ಸಾಲ್ಮನಿ ಹಾಗೂ ನಾನು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.