
ಮತದಾರರ ಪಟ್ಟಿಯಲ್ಲಿ ವಿಧ್ಯಾರ್ಥಿಗಳು ಕಡ್ಡಾಯ ನೊಂದಣಿ ಮಾಡಿಕೊಳ್ಳಿರಿ: ಸಂತೋಷ ಪಾಟೀಲ್
ಕೆ.ಎಲ್.ಇ ಪದವಿ ಪೂರ್ವ ಕಾಲೇಜು ಮತ್ತು ವುದ್ಯಾನಂದ ಗುರುಕುಲ ಕಾಲೇಜಿನಲ್ಲಿ ಸ್ವೀಪ್ ಕಾರ್ಯಕ್ರಮ
ಕುಕನೂರ 08- ತಾಲೂಕ ವಿಶೇಷ ಸಹಾಯಕ ಮತದಾರರ ನೊಂದಣಾಧಿಕಾರಿ ಹಾಗೂ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕುಕನೂರ ಪಟ್ಟಣದ ಕೆ.ಎಲ್.ಇ ಮತ್ತು ಗುರುಕುಲ ಕಾಲೇಜುಗಳಲ್ಲಿನ ವಿವಿಧ ಬ್ರಾಂಚ್ ನ ವಿದ್ಯಾರ್ಥಿಗಳಿಗಾಗಿ* ಏರ್ಪಡಿಸಿದ್ದ ಸ್ವೀಪ್ ಕಾರ್ಯಕ್ರಮದಡಿ ಯುವ ಮತದಾರರ ನೊಂದಣಿ ಅಭಿಯಾನದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ನೊಂದಣೆ, ತಿದ್ದುಪಡಿಗಾಗಿ ಅವಕಾಶ ಕಲ್ಪಿಸಿದ್ದು ಇದರ ಸದುಪಯೋಗವನ್ನು ಯುವ ಮತದಾರರು ಪಡೆದುಕೊಳ್ಳಬೇಕು ಮತ್ತು ವಿಧ್ಯಾರ್ಥಿ ಗಳು ಶೈಕ್ಷಣಿಕ ಪಠ್ಯ ಪುಸ್ತಕಗಳ ಜ್ಯೋತೆಗೆ ಸ್ಪರ್ಧಾತ್ಮಕ ಪರೀಕ್ಷೇಗಳನ್ನು ಬರೆಯಲು ಸಲಹೆ ನೀಡಿದರು.
ತಹಶೀಲ್ದಾರರಾದ ಎಚ್ ಪ್ರಾಣೇಶ್ ರವರು ಮಾತನಾಡಿ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹೊಂದಲುಅರ್ಜಿ ನಮೂನೆ-6ಆಧಾರ ಕಾರ್ಡಮಾರ್ಕ್ಸ್ ಕಾರ್ಡ/ವರ್ಗಾವಣೆ ಪ್ರಮಾಣ ಪತ್ರಪೋಟೋಇಗಾಲೇ ಮತದಾರ ಗುರುತಿನ ಚೀಟಿ ಹೋಂದಿದ ಮನೆಯವರ ಮತದಾರ ಚೀಟಿ* ಗಳನ್ನು ತಮ್ಮ ಹತ್ತಿರದ BLO ಗಳಿಗೆ ನೀಡಬೇಕು, ಅಥವಾ Voter help line app ಮೂಲಕ ನೊಂದಣೆ ಮಾಡಿಕೊಳ್ಳಲು ಮಾಹಿತಿ ನೀಡಿದರು.
68 ಯುವ ಮತದಾರರಿಗೆ ಅರ್ಜಿಗಳನ್ನು ನೀಡಲಾಯಿತು. ಮತ್ತು ನಮೂನೆಗಳನ್ನು ಭರ್ತಿ ಮಾಡಿ BLO ರವರಿಗೆ ನೀಡಲು ತಿಳಿಸಲಾಯಿತು.ಸ್ಥಳದಲ್ಲಿ ಕಂದಾಯ ನಿರೀಕ್ಷರಾದ ರಂಗನಾಥ ಬಂಡಿ ತಾಲೂಕ ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ವಿದ್ಯಾನಂದ ಗುರುಕುಲ ಕಾಲೇಜಿನ ಪ್ರಾಚಾರಗಯರು ವಿದ್ಯಾರ್ಥಿಗಳು ಹಾಜರಿದ್ದರು.