IMG-20231024-WA0003

ಕುಕನೂರ ಮೆಲೋಡಿಸ ತಂಡದಿಂದ
ಉತ್ತಮವಾದ ಉಚಿತ ಕಲಾ ಸೇವೆ :ಗಗನ ನೋಟಗಾರ ಶ್ಲಾಘನೆ
ಕರುನಾಡು ಬೆಳಗು ಸುದ್ದಿ .
ಕುಕನೂರ24-ಕುಕನೂರ ಮೆಲೋಡಿಸ ತಂಡದಿಂದ ಉತ್ತಮವಾದ ಕಲಾ ಸೇವೆ ಎಂದು ಪ. ಪಂ. ಸದಸ್ಯ ಗಗನ ನೋಟಗಾರ ಅವರು ಹೇಳಿದರು.
ಪಟ್ಟಣದ ಇಟಗಿ ಮಸೂದಿ ಅವರ ಜಾಗೆ ಯಲ್ಲಿ ಅಮ್ಮಿ ಕೊಂಡಿದ ಉಚಿತ ಹಾಸ್ಯ ರಸ ಮಂಜರಿ ಕಾರ್ಯಕ್ರಮವನ್ನು ಸೋಮವಾರ ರಾತ್ರಿ 9 ಗಂಟೆಗೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಪ. ಪಂ. ಸದಸ್ಯ ಗಗನ ನೋಟಗಾರ ಮಾತನಾಡಿ, ಶ್ರೀ ಮಹಾಮಾಯ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕುಕನೂರು ಮೆಲೋಡಿಸ್ ತಂಡದಿಂದ ಉಚಿತ ಹಾಸ್ಯ ರಸಮಂಜರಿ ಕಾರ್ಯಕ್ರಮವನ್ನು ಮಾಡುತ್ತಿರುವ ಕಲಾವಿದರ ಸೇವೆ ತುಂಬಾನೇ ದೊಡ್ಡದು, ಕಲೆಗೆ ಬೆಲೆ ಕಟ್ಟಲಾಗದು ಎಂಬ ಮಾತಿಗೆ ಈ ಉತ್ತಮವಾದ ಕಲಾತಂಡ ಸೇವೆ ಉದಾಹರಣೆ ಆಗಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡು ಕಲಾವಿದ ಅನಿಲಕುಮಾರ ಮಾತನಾಡಿ, ಶ್ರೀ ಮಹಾಮಾಯ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮ ಕಲಾವಿದರಾದ ಲಾವಣ್ಯ, ಗಂಗಾಧರ್, ಡ್ಯಾನ್ಸರ್ ಸುಪ್ರಿಯಾ , ಭಾರತಿ, ಅಂಕಿತ, ಅಶೋಕ್, ಮಂಜು, ಟಿವಿ 9ಕಲಾವಿದ ಮ್ಯಾರೇಶ್ ಇವರಿಂದ ಉತ್ತಮವಾದ ಕಲಾ ಸೇವೆ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ರಾಮಣ್ಣ ಮುಂದಲಮನಿ, ರೈತ ಶರಣಪ್ಪ ಚಂಡೂರು, ಪತ್ರಕರ್ತ ಮುರಾರಿ ಭಜಂತ್ರಿ, ಲಕ್ಷ್ಮಣ ತಳವಾರ ಇತರರಿದ್ದರು.
ಪಂಚಾಕ್ಷರಿ ಕಲಾವಿದರ ತಂಡದಿಂದ ಉಚಿತ ಸಂಗೀತ ಕಾರ್ಯಕ್ರಮ ಕಲಾ ಸೇವೆ ಮಾಡಲಾಯಿತು. ಬಸಯ್ಯ ಕೆ ಎಸ್ ಆರ್ ಟಿಸಿ ಕುಕನೂರ ಇವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!