
ಕುಕನೂರಿನಲ್ಲಿ ಜನಮನ ಸೆಳೆದ ಸುಗಮ ಸಂಗೀತ ಕಾರ್ಯಕ್ರಮ.
ಸಂಗೀತ ರಸದೌತಣ ಉಣಬಡಿಸಿದ ಕಲಾವಿದರು
ಕರುನಾಡ ಬೆಳಗು ಸುದ್ದಿ
ಕುಕನೂರು27-ಪಟ್ಟಣದ ಅನ್ನದಾನೇಶ್ವರ ಶಾಖಾಮಠದಲ್ಲಿ ಸಂಜೆ ಶ್ರೀ ಗಾನ ಗಂಧರ್ವ ಗುರು ಪುಟ್ಟರಾಜ ಸಾಂಸ್ಕೃತಿಕ ಕಲಾ ಸಂಸ್ಥೆ ನವಲಿ ಹಾಗೂ ಕನ್ನಡ ಮತ್ತು ಸಂತು ಇಲಾಖೆ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮ ಸಾನಿಧ್ಯ ವಹಿಸಿದ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರು ಕಲಾವಿದರಿಗೆ ಸಹಕಾರ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಂಗೀತ ಕಲೆಯನ ಬೆಳೆಸಿ ಉಳಿಸುವ ಕಾರ್ಯವಾಗಬೇಕು, ನಮ್ಮೂರಿನ ಸಾಕಷ್ಟು ಪ್ರತಿಭಾವಂತ ಕಲಾವಿದರು ನಾಡಿನ ನಾನಾ ಮೂಲೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ, ಅಂತವರ ಸಾಲಿಗೆ ಯುವ ಕಲಾವಿದರು ಕೂಡ ಸೇರಬೇಕು.
ಸಂಗೀತ ಕ್ಷೇತ್ರಕ್ಕೆ ಹಾಗೂ ಅಂದ ಅನಾಥರಿಗೆ ಅಕ್ಷರ ಅನ್ನ ಗಾಯನ ನೀಡಿದ ಪುಟ್ಟರಾಜ ಗವಾಯಿಗಳು,ಕರುನಾಡಿನ ಅನರ್ಗ್ಯ ರತ್ನ ಪಂಡಿತ್ ಗಾನಯೋಗಿ ಪುಟ್ಟರಾಜ ಗವಾಯಿಗಳು ಅಂದ ಅನಾಥ ಮಕ್ಕಳಿಗೆ ದಾರಿದೀಪವಾದವರು ಅಕ್ಷರ ಅನ್ನ ಗಾಯನ ನೀಡಿದ ಮಹಾನ್ ದಿವ್ಯ ಚೇತನರು.ಉಭಯ ಗುರುಗಳ ಇಚ್ಛೆಯಂತೆ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕೃಪಾ ಆಶೀರ್ವಾದದಿಂದ ಸಂಗೀತಾ ಸಾಹಿತ್ಯ ನಾಟಕ ಜೊತೆ ಜೊತೆಗೆ ಸಕಲ ವಾದ್ಯ ನುಡಿಸುವ ಕಲಾ ಕಂಠೀರವ ಪುಟ್ಟರಾಜ ಗವಾಯಿಗಳು.
ಬದುಕಿನ ಉದ್ದಕ್ಕೂ ತಮ್ಮ ಸೃಜನಾತ್ಮಕ ಹಾಗೂ ಕ್ರಿಯಾಶೀಲತೆಯಿಂದ ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು ಅವರ ಆಶ್ರಮದಲ್ಲಿ ಸಂಗೀತ ಕರಗತ ಮಾಡಿಕೊಂಡ ಸಾವಿರಾರು ವಿದ್ಯಾರ್ಥಿಗಳು ಸಂಗೀತ ಪರಂಪರೆ ಹಾಗೆ ಮುಂದುವರಿದು ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರು ಬೆಳೆಯುತ್ತಿದ್ದಾರೆ ಈ ಸಂದರ್ಭದಲ್ಲಿ ಕಲಾವಿದ ರವಿಚಂದ್ರ ಭಜಂತ್ರಿಯವರಿಂದ ಸುಗಮ ಸಂಗೀತ ಪ್ರಸ್ತುತಪಡಿಸಿದರು ಕಲಾವಿದ ಮುರಾರಿ ಭಜಂತ್ರಿ, ಮುಕುಂದ ಭಜಂತ್ರಿ , ಸುಮತಿ ಭಜಂತ್ರಿ, ಭಾಸ್ಕರ್ ಆಚಾರ್, ಪದ್ಮಾವತಿ ಮುರಾರಿ ಭಜಂತ್ರಿ ಅವರಿಂದ ಸಂಗೀತ ಸೇವೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪಂಚಾಯತಿ ಸದಸ್ಯರಾದ ನೂರುದ್ದೀನ್ ಗುಡಿಯಿಂದಲ್, ಪ್ರಶಾಂತ್ ಆರಬೇರಳಿನ್, ಮಂಜುನಾಥ್ ಮ್ಯಾದರ್, ಚಂದ್ರು ಬಾಗನಾಳ, ಬಸವರಾಜ ಕಿತ್ತೂರು, ಸಂಗಪ್ಪ ಕೊಪ್ಪದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.