
ಪಂಪಾ ಸರೋವರ ಕುಟೀರಕ್ಕೆ ಬೆಂಕಿ
ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರ ಮೇಲೆ ಅನುಮಾನ ; ಬಾದವಾಡಗಿ
ಕಿಡಿಗೇಡಿಗಳ ಬಂದನಕ್ಕೆ ಕೆ.ಆರ್.ಪಿ .ಪಿ ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾಸರೋವರದ ಹತ್ತಿರ ಇರುವ ಕುಟೀರಕ್ಕೆ ಬೆಂಕಿ ತಗುಲಿ ಹಾನಿಗೊಳಗಾಗಿದ್ದು ಅದಕ್ಕೆ ಕಾರಣವಾದ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳವಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ಆಗ್ರಹಿಸಿದರು.
ಅವರು ಗುರುವಾರದಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಘಟನೆ ಆಕಸ್ಮಿಕ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದನ್ನು ಪೋಲಿಸ್ ಇಲಾಖೆ ತನಿಖೆ ಮಾಡುವಂತೆ ಆಗ್ರಹಿಸಿದರು.
ಗಂಗಾವತಿಯ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಐತಿಹಾಸಿಕ ಸ್ಥಳದ ಮಹಿಮೆಯನ್ನು ಅರಿಯದೆ ಪಂಪಾಸರೋವರದ ಕುಟೀರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತವಾದ ತನಿಖೆಯನ್ನು ನಡೆಸಬೇಕೆಂದು ಒತ್ತಾಯಿಸಿದರು.
ಬಿಜಿಪಿ ಮೇಲೆ ಅನುಮಾನ; ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ಮಾತನಾಡಿ ಅಂಜನಾದ್ರಿ ದೇವಸ್ಥಾನದ ಹಾಗೂ ಆನೆಗುಂದಿ ಭಾಗದ ಸಾರ್ವಜನಿಕ ಅಭಿವೃದ್ಧಿ ಕಾರ್ಯಾಗಳಿಗೆ, ಸಾರ್ವಜನಿಕರೊಂದಿಗೆ, ಅಧಿಕಾರಿಗಳೊಂದಿಗೆ ಹಾಗೂ ಸಂಬಂಧಿಸಿದ ಇಲಾಖೆಯೋಂದಿಗೆ ಅಭಿವೃದ್ಧಿ ಕಾರ್ಯಾಗಳನ್ನು ಕೈಗೊಳ್ಳಲು ಮತ್ತು ಸಭೆಗಳನ್ನು ಮಾಡಲು ಪಂಪಾಸರೋವರದ ಹತ್ತೀರ ಕುಟೀರವನ್ನು ಉಪಯೋಗಿಸುತ್ತಿದ್ದರು.
ಅಂಜನಾದ್ರಿಯಲ್ಲಿ ಹನುಮ ಮಾಲ ವಿಸರ್ಜನೆ ಯಶಸ್ವಿ ಸಹಿಸದೆ ಅದರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಅಭಿವೃದ್ಧಿ ಮಾಡದೆ ಇರುವವರು ಈ ಕೃತ್ಯ ಎಸಗಿರ ಬಹುದು ಎಂದು ಅನುಮಾನ ವ್ಯಕ್ತಪಡಿಸಿ ಪರೋಕ್ಷವಾಗಿ ಬಿಜಿಗರ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ದುಷ್ಕರ್ಮಿಗಳು ಈ ಶೆಡ್ಡಿಗೆ ಬೆಂಕಿಯನ್ನು ಹಚ್ಚಿರುವುದು ಕಂಡುಬಂದಿರುತ್ತದೆ. ಈ ಪ್ರಕಣವನ್ನು ಕೂಡಲೇ ಗಂಭಿರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.