IMG-20231106-WA0006

ಕುಣಕೇರೆ ಶಾಲೆಗೆ ಹುಚ್ಚಮ್ಮನ ಹೆಸರಿಡಲು ಆಗ್ರಹ

ಕರುನಾಡ ಬೆಳಗು ಸುದ್ದಿ

ಕೊಪ್ಪಳ.06- ಕುಣಿಕೇರಿ ಗ್ರಾಮದಲ್ಲಿ ಸರ್ಕಲ್ ಒಂದಕ್ಕೆ ಅವರ ಹೆಸರನ್ನು ಇಡಬೇಕು, ಅವರಿಗೆ ವಸತಿ ಯೋಜನೆಯಡಿ ಗುಣಮಟ್ಟದ ಮನೆಯನ್ನು ಕಟ್ಟಿಸಿ ಕೊಡಬೇಕು ಹಾಗೂ ಕುಣಕೇರೆ ಶಾಲೆಗೆ ಹುಚ್ಚಮ್ಮನ ಹೆಸರು ಇಡಬೇಕಂದು ಪ್ರಗತಿ ಪರ ಚಿಂತಕ ಬಸವರಾಜ ಶೀಲವಂತರ ಆಗ್ರಹಿಸಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದ. ತಾಲೂಕಿನ ಕುಣಿಕೇರಿ ಗ್ರಾಮದ ಸರಕಾರಿ .ಹಿ. ಪ್ರಾ,ಶಾಲೆಗೆ , ಅದೇ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದ ಹುಚ್ಚಮ್ಮ ಚೌದ್ರಿ ಇವರು, ಜೀವನ ನಿರ್ವಹಣೆಗೆಂದು ಇದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ತನ್ನ ಎರಡು ಎಕರೆ ಜಮೀನನ್ನು ಶಾಲೆಗೆ ದಾನ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಶಾಲಾ ಮಕ್ಕಳ ಕಲಿಕೆ ಅನುಕೂವಾಗಲೆಂದು ಶಾಲಾ ಕಟ್ಟಡಕ್ಕಾಗಿ ಜಾಗೆಯನ್ನು ನೀಡಿದ ಮಹಾತ್ಯಾಗಿ ಹುಚ್ಚಮ್ಮ ಇವರ ಈ ಸಾಧನೆಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರ, ಹುಚ್ಚಮ್ಮ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿಗೌರರವಿಸಿದೆ. ಆದರೆ ಯಾವ ಫಲಾಪೇಕ್ಷೆಯನ್ನು ಬಯಸದೆ ಜಮೀನು ದಾನವನ್ನು ಮಾಡಿದ ಹುಚ್ಚಮ್ಮ ಅವರ ಹೆಸರನ್ನು ಇದುವರೆಗೂ ಆ ಶಾಲೆಗೆ ಇಡದಿರುವುದು ಬೆಸರದ ಸಂಗತಿ. ಬಿಸಿಯೂಟ ಕೆಲಸದಿಂದ ನಿವೃತ್ತಿಯಾದ ಹುಚ್ಚಮ್ಮ ಇವರಿಗೆ ಸರಕಾರದಿಂದಾಗಲಿ ಜಿಲ್ಲಾಡಳಿತದಿಂದಾಗಲಿ ಯಾವುದೆ ರೀತಿಯ ಸಹಾಯ ಸಿಕ್ಕಿರುವುದಿಲ್ಲ.

ಕೊಪ್ಪಳ ಜಿಲ್ಲಾಡಳಿತ ಮತ್ತು ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರು ಎಚ್ಚೆತ್ತುಕೊಂಡು, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ , ಕೊಪ್ಪಳ ಜಿಲ್ಲಾ ಸಮಿತಿಯು ಇಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯನ್ನು ಪರಿಗಣಿಸಿ, ಮನವಿಯಲ್ಲಿ ಪ್ರಸ್ತಾಪಿಸಿದಂತೆ, ಕುಣಿಕೇರಿ ಶಾಲೆಗೆ ಅವರ ಹೆಸರನ್ನು ಇಡಬೇಕು,
ಕುಣಿಕೇರಿ ಗ್ರಾಮದಲ್ಲಿ ಸರ್ಕಲ್ ಒಂದಕ್ಕೆ ಅವರ ಹೆಸರನ್ನು ಇಡಬೇಕು, ಅವರಿಗೆ ವಸತಿ ಯೋಜನೆಯಡಿ ಗುಣಮಟ್ಟದ ಮನೆಯನ್ನು ಕಟ್ಟಿಸಿ ಕೊಡಬೇಕು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!