
ಕುರುಬರ ಹಾಸ್ಟೆಲ್ ಮೇಲೆ ಕಲ್ಲು ತೂರಾಟ: ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಜಿ ಕನಕ ಖಂಡನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,31- ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಕ್ಕೆ ಸಂಬಂಧಿಸಿದ ವಿವಾದದಲ್ಲಿ ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಿಜೆಪಿಯ ಸಿ.ಟಿ ರವಿ ಇವರ ಕುಮ್ಮಕ್ಕಿನಿಂದ ಕುರುಬರ ಹಾಸ್ಟೆಲ್ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿ ಕಿಟಕಿ ಗಾಜು ಗಳನ್ನು ಪುಡಿ ಮಾಡಿದ್ದು ಖಂಡನೀಯ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದ ಎಂ.ಜಿ ಕನಕ ಬಿಜೆಪಿ ವಿರುದ್ಧ ಆಕ್ರೋಶ ಹೋರ ಹಾಕಿದರು.
ಹನುಮ ಧ್ವಜ ಹಾರಿಸಲು ಅನುಮತಿ ಪಡೆಯದೆ ಹಾರಿಸಿದ್ದು ಕಾನೂನಿನ ಪ್ರಕಾರ ತಪ್ಪು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಆದರೆ ಬಿಜೆಪಿಯವರು ತಮ್ಮ ಬೆಳೆ ಬೆಯಿಸಲು ಮತ್ತು ಮುಂದಿನ ಲೋಕ ಸಭೆಯಲ್ಲಿ ಮತ ಪಡೆಯಲು ಜನರಿಗೆ ಜಾತಿ, ಧ್ವಜ, ಧರ್ಮದ ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ ಎಂದು ಎಂ.ಜಿ ಕನಕ ಹೇಳಿದ್ದಾರೆ.