
ಕುಷ್ಟಗಿಯಲ್ಲಿ ರೈತ ದಿನಾಚರಣೆ
ಜಿಲ್ಲಾ ಮಟ್ಟದ ಸಿರಿಧಾನ್ಯ ಸಾವಯುವ ಕ್ರಿಷಿ ಸಮಾರಂಭ
ಕೊಪ್ಪಳ, ೨೫- ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಣದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರೈತ ದಿನಾಚರಣೆ ನಿಮಿತ್ಯವಾಗಿ ಕೊಪ್ಪಳ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯುವ ಆರ್ಗೆನಿಕ ಕ್ರಿಷಿ ರೈತರಿಗೆ ಜಿಲ್ಲಾ ಕ್ರಿಷಿ ಯೋಜನೆ ಅಡಿಯಲ್ಲಿ ಶ್ರೇಷ್ಠ ಕೃಷಿ ಕರೆಂದು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಆಗಿರುವ ನೂರಾರು ರೈತರಿಗೆ ಶನಿವಾರ ದಿವಸ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕರಾದ ಸವಿತಾ ಗಂಡ ಉಮೇಶ ನಾಗರಡ್ಡಿ. ಗ್ರಾಮ ಓಜನಹಳ್ಳಿ ರೈತರಾದ ತಾತನ ಗೌಡ ರುದ್ರಗೌಡ ಜಂತ್ಲಿ. ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಿಂದ ಇವರು ಸಹ ಶ್ರೇಷ್ಠ ಕೃಷಿಕರಲ್ಲಿ ಆಯ್ಕೆ ಆದವರೆಲ್ಲರಿಗೂ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಈ ವೇಳೆಯಲ್ಲಿ ರಾಜ್ಯ ಮಟ್ಟದ ಮೂರು ಜನ ಕೃಷಿ ಪಂಡಿತ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು ಎಂದು ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಕೃಷಿ ಪಂಡಿತ ರೈತರಾದ ಸುರೇಶ ಚೌಡ್ಕಿ. ವೀರನಗೌಡ ಆರಾಳ, ಬಸಪ್ಪ ಕಾಮನೂರು, ಇವರನ್ನು ಸನ್ಮಾನಿಸಿದರುಈ ಕಾರ್ಯಕ್ರಮ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ.ಕೊಪ್ಪಳ, ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ನಡೆಸಲಾಯಿತು.ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಇತರರು ಪಾಲ್ಗೊಂಡಿದ್ದರು.