IMG-20231217-WA0010

ಕೂಲಿ‌ ಕಾರ್ಮಿಕರಿಗೆ ಆಸರೆಯಾದ “ಶಕ್ತಿ ಯೋಜನೆ”
ಮಹಿಳೆಯರ ಆರ್ಥಿಕ ಪರಸ್ಥಿತಿ ಸುಧಾರಣೆ

ಕರುನಾಡ ಬೆಳಗು ಸುದ್ದಿ

ಸುಭಾಷ ಮದಕಟ್ಟಿ

ಯಲಬುರ್ಗಾ, 17- ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ ಯೋಜನೆ” ಜಾರಿಯಿಂದ ನಗರದ ದಿನಗೂಲಿ ಕಾರ್ಮಿಕರಿಗೆ ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ಇದು ವರದಾನವಾಗಿದೆ.

ಪ್ರತಿ ನಿತ್ಯ ಕೂಲಿ ಅವಲಂಬಿಸಿರುವ ಕಾರ್ಮಿಕರಿಗೆ ಈ ಯೋಜನೆ ತುಂಬಾ ಅನುಕೂಲ ಕಲ್ಪಿಸಿದೆ. ಅವರ ಆರ್ಥಿಕ ಹೊರೆ ತಗ್ಗಿಸಿದೆ.ಮಹಿಳೆಯರು ಈ ಯೋಜನೆ ಜಾರಿಗೆ ತುಂಬಾ ಹರ್ಷವ್ಯಕ್ತಪಡಿಸಿದ್ದಾರೆ. ಮತ್ತು ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಬಸ್ ಕೊರತೆ ಇದ್ದ ಪರಿಣಾಮ ಜನಜಂಗುಳಿ ಪ್ರಮಾಣ ಹೆಚ್ಚಾಗಿದೆ.‌ ಅಲ್ಲಲ್ಲಿ ಈ ಯೋಜನೆ ಜಾರಿಯಿಂದ ಅಪಸ್ವರಗಳು ಬಂದಿವೆ.‌
ಆದರೆ ಬಡ, ಮಧ್ಯಮ ಕೂಲಿ ಕಾರ್ಮಿಕರಿಗೆ ಹಾಗೂ ವಿಧ್ಯಾರ್ಥಿನಿಯರು ಈ ಯೋಜನೆ ತುಂಬಾ ಅನುಕೂಲತೆ ಒದಗಿಸಿದೆ. ದಿನನಿತ್ಯದ ಕರ್ಚುಗಳಲ್ಲಿ ಬಸ್ ಪ್ರಯಾಣವೂ ಒಂದಾಗಿತ್ತು.‌ ಅವರ ಬಸ್ ದರ ಸರಕಾರ ಸಂಪೂರ್ಣವಾಗಿ ಭರಸುವುದರಿಂದ ಆರ್ಥಿಕ ಸುಧಾರಣೆಗೆ ಅನುಕೂಲವಾಗಿದೆ. ಶಕ್ತಿ ಯೋಜನೆ ಜಾರಿಯಿಂದ ಜನ ತಮ್ಮ ಆದಾಯದ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ.‌ ತಾಲೂಕಿನಲ್ಲಿ ಶಕ್ತಿ ಯೋಜನೆಗೆ ಜನತೆ ಬಹುಪರಾಕ್ ಎಂದಿದ್ದಾರೆ.

ಪ್ರತಿ ನಿತ್ಯ ತರಕಾರಿ ಮಾರುವ, ಹೂ ಮಾರುವ, ಹಣ್ಣು ಹಂಪಲು, ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಮಾರುವ ಕಾರ್ಮಿಕರಿಗೆ ಈ ಯೋಜನೆ ಜಾರಿಯಿಂದ ಅವರ ಆರ್ಥಿಕ ಹೊರೆ ಕಮ್ಮಿ ಮಾಡಿದೆ. ಏನಾದರೊಂದು ಕೆಲಸ ಅರಸಿ ಇನ್ನೊಂದು ಊರಿಗೆ ಹೊಗುವ ಕೂಲಿ ಕಾರ್ಮಿಕರಿಗೆ ಬಸ್ ದರ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿತ್ತು.‌

ಈಗ ಈ ಯೋಜನೆ ಜಾರಿಯಿಂದ ಅವರಿಗಿದ್ದ ಪ್ರಮುಖ ಸಮಸ್ಯೆ ಪರಿಹಾರ ಆದಂತೆ ಅನಿಸುತ್ತಿದೆ. ದಿನಬಳಕೆ ವಸ್ತುಗಳ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ, ದಿನನಿತ್ಯ ಬಳಕೆ ಮಾಡುವಂತಹ ಅಕ್ಕಿ, ಗೋಧಿ, ಚಹಾ ಪುಡಿ, ಹಾಲು, ಸಕ್ಕರೆ, ಬೇಳೆ, ಈರುಳ್ಳಿ, ಟೊಮೆಟೊ ದರಗಳು ಗಗನಕ್ಕೆ ಏರಿದೆ. ಈ ಸಂದರ್ಭದಲ್ಲಿ ಒಂದು ಬಡ, ಮಧ್ಯ ಮವರ್ಗದ ಕುಟುಂಬಕ್ಕೆ 1-2 ಸಾವಿರ ಮಾಸಿಕವಾಗಿ ಉಳಿತಾಯವಾದರೂ ಕೂಡಾ ಅದು ಅತೀ ದೊಡ್ಡ ಮೊತ್ತವೇ ಆಗುತ್ತದೆ. ಅದರಲ್ಲೂ ಒಂದು ಕುಟುಂಬದಲ್ಲಿ ವಿದ್ಯಾರ್ಥಿನಿಯರು ಇದ್ದರೆ, ಅವರ ಶಾಲಾ ಓಡಾಟದ ಖರ್ಚು ಉಳಿತಾಯವಾಗಲಿದೆ. ಅದು ವಿದ್ಯಾರ್ಥಿನಿಯ ಒಟ್ಟು ಶಿಕ್ಷಣದ ವೆಚ್ಚದಲ್ಲಿ ಕಡಿಮೆಯಾಗಲು ಸಹಾಯಕವಾಗಲಿದೆ. ಉಳಿತಾಯ ಆದ ಹಣವನ್ನು ಇನ್ನೊಂದು ಕೆಲಸಕ್ಕೆ ಬಳಸಿಕೊಳ್ಳಲು ಸಹಕಾರಿಯಾಗಿದೆ.
ಬಸ್ ದರ ಉಚಿತವಾಗಿದ್ದರಿಂದ, ಪ್ರತಿ ತಿಂಗಳು ಉಳಿತಾಯವಾಗುವ ಹಣದಲ್ಲಿ ರೇಷನ್, ಟ್ಯೂಷನ್ ಫೀ, ಹಗೂ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿ ಮಾಡುವಲ್ಲಿ ಸಹಕಾರಿಗಾಲಿದೆ ಎಂದು ಜನ ಶಕ್ತಿ ಯೋಜನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

         ನಾವೂ ತಯಾರಿಸಿದ ವಸ್ತುಗಳನ್ನು ಇನ್ನೊಂದು ಊರಿಗೆ ಹೋಗಿ ಮಾರಾಟ ಮಾಡುವುದರಿಂದ ಬಸ್ ದರ ಹೊರೆಯಾಗಿತ್ತು. ಈ ಶಕ್ತಿ ಯೋಜನೆಯಿಂದ ತಿಂಗಳಿಗೆ 3 ರಿಂದ 4 ಸಾವಿರ ಉಳಿತಾಯವಾಗಲಿದೆ. ಸರಕಾರಕ್ಕೆ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೆನೆ –

                                       ರೇಖಾ ಶರಣಪ್ಪ ಮದಕಟ್ಟಿ 
                                  ಕೌದಿ ತಯಾರಕರು, ಮಂಗಳೂರ್

Leave a Reply

Your email address will not be published. Required fields are marked *

error: Content is protected !!