IMG-20240117-WA0031

ಬೇವೂರು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಗ್ರಾಹಕರ ಪರದಾಟ 

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ 17ತಾಲೂಕಿನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಬೇವೂರು ಶಾಖೆಯಲ್ಲಿ ಗ್ರಾಹಕರು ಹಣ ಪಡೆಯಲು ದಿನನಿತ್ಯ ಗ್ರಾಹಕರು ಪರದಾಡಿದರು.

ಶಾಲೆ- ಕಾಲೇಜುಗಳು ಪ್ರಾರಂಭವಾಗುವ ಸಮಯವು ವಿದ್ಯಾರ್ಥಿ ವೇತನಕ್ಕಾಗಿ ಬ್ಯಾಂಕ್ ಖಾತೆ ಹೊಂದುವುದು ಅನಿವಾರ್ಯ, ಇದರಿಂದ ಬ್ಯಾಂಕ್‌ನಲ್ಲಿ ನೂಕುನುಗ್ಗಲು ಇರುತ್ತದೆ.

ಇಲ್ಲಿರುವ ಸಿಬ್ಬಂದಿಗಳು ಕೆಲಸ ಮಾಡುವ ತೊಂದರೆ ಅನುಭವಿಸುತ್ತಿದೆ ಪ್ರತ್ಯೇಕವಾಗಿ ದೊಡ್ಡದಾದ ಕಛೇರಿ ನಿರ್ಮಾಣ ಮಾಡಿಕೊಡಬೇಕು.

ಸಿಬ್ಬಂದಿಯು ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ ಅನಕ್ಷರಸ್ಥ ಗ್ರಾಹಕರು ಬಂದರೆ ಅವರ ಗೋಳು ಹೇಳತೀರದು ಅವರಿಗೆ ಯಾವ ರೀತಿಯ ಮಾಹಿತಿಯನ್ನು ಸಿಬ್ಬಂದಿಗಳು ನೀಡುತ್ತಿಲ್ಲ .

ಬ್ಯಾಂಕ್ ಮಿತ್ರರಾಗಿ ಕಾರ್ಯ ನಿರ್ವಹಿಸುತ್ತಿರುವವರು ಕೆಲ ದಿನಗಳಿಂದ ಬ್ಯಾಂಕ್‌ನಲ್ಲಿ ಕಾಣಿಸುತ್ತಿಲ್ಲ. ಅವರ ಸಹಾಯದಿಂದ ಕೆಲವು ಸೇವೆಗಳು ಸಿಗುತ್ತಿದ್ದವು. ಆದರೆ, ಅವರ ಬಳಿ ಇರುವ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಬ್ಯಾಂಕ್ ಪಾಸ ಪುಸ್ತಕಗಳು ಸಹ ಲಭ್ಯವಿಲ್ಲ ಸ್ಥಳದಲ್ಲಿ ಎಟಿಎಂ ವ್ಯವಹಾರವಿಲ್ಲ ಬ್ಯಾಂಕ್ ವ್ಯವಹಾರಕ್ಕೆ ಬಂದರೆ ದಿನವಿಡಿ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಪ್ರಗತಿ ಕೃಷ್ಣಾ ಬ್ಯಾಂಕ್ ಅಧಿಕಾರಿಗಳು ಸರಾಗವಾಗಿ ವ್ಯವಹಾರ ಮಾಡಲು ಪ್ರತ್ಯೇಕ ದೊಡ್ಡ ಕಚೇರಿ ಮತ್ತು ಕೆಲಸ ಮಾಡಬೇಕು. ಮಲ್ಲನಗೌಡ ಕೋನನಗೌಡ್ರ. ಸಿದ್ದುಮಣ್ಣಿನವರ.

ಹೇಮಂತ ಹಂಚಿ, ನಾಗರಾಜ ನೇಲಜೇರಿ ಶರಣಪ್ಪ ಗೊಂಡಿ ,ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!