
ಕೆ.ಬೆಳಗಲ್ ಚೆಕ್ಪೋಸ್ಟ್ ನಲ್ಲಿ ದಾಖಲೆಯಿಲ್ಲದ 70 ಸಾವಿರ ರೂ. ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,26- ತಾಲೂಕು ಗಡಿ ಭಾಗದ ಕೆ ಬೆಳಗಲ್ ದಾಖಲೆ ಇಲ್ಲದೆ ತಾಲೂಕಿನ ಕೆ.ಸೂಗುರು ಗ್ರಾಮದಿಂದ ಮಾಟಸೂಗೂರು ಗ್ರಾಮಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಚನ್ನಪ್ಪ ಎನ್ನುವವರನ್ನು ಚೆಕ್ಪೋಸ್ಟಿನಲ್ಲಿ ವಿಜಯ ಕೃಷ್ಣ ಅವರು ತಪಾಸಣೆ ನಡೆಸಿದಾಗ 70 ಸಾವಿರ ರೂ ಹಣ ದೊರಕಿದ್ದು ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದ ಕಾರಣ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಎಂಸಿಸಿ ತಂಡದ ಮುಖ್ಯಸ್ಥ ಪವನ್ ಕುಮಾರ್ ಎಸ್ ದಂಡಪ್ಪನವರು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಡಾ ಎಂ ತಿರುಮಲೇಶ್ ತಹಸಿಲ್ದಾರ್ ಶಂಶೇ ಆಲಂ ಚುನಾವಣೆ ಶಿರಸ್ತೆದಾರ್ ರವೀಂದ್ರ ಬಾಬು ಮತ್ತಿತರರು ಇದ್ದರು.