
ತೆಕ್ಕಲಕೋಟೆ: ಕೇಂದ್ರ ಸರ್ಕಾರದ ಬಜೆಟ್ ನೀತಿ ವಿರೋಧಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,7- ತಾಲೂಕಿನ ತೆಕ್ಕಲಕೋಟೆ ನಾಡಕಚೇರಿ ತಾಲೂಕಿನ ಅಂಗನವಾಡಿ ಸಂಘ ಸಿ ಐ ಟಿ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಬಜೆಟ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಅಧ್ಯಕ್ಷೆ ಬಿ ಉಮಾದೇವಿ ಅವರು ಮಾತನಾಡಿ ಸರ್ಕಾರದ ಬಜೆಟ್ ನಲ್ಲಿ ಪೌಷ್ಟಿಕ ಆಹಾರ ಹಾಗೂ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರಿಗೆ ನೀಡುವ ಅನುದಾನದಲ್ಲಿ 300 ಕೋಟಿ ಕಡಿತಗೊಳಿಸಿದ್ದು ಎರಡು ಕೋಟಿ ತಾಯಂದಿರು ಎಂಟು ಕೋಟಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ವಿರೋಧಿಸಿ ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಕುಂತಲಾ ಖಜಾಂಚಿ ಮೇಲ್ ಖಾಜಾ ಬಿ ಸದಸ್ಯರಾದ ಕೆ ನೀಲಾವತಿ ಈರಮ್ಮ ಚಂದ್ರಕಲಾ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.