IMG_20250418_121006

ಕೊಪ್ಪಳಕ್ಕೆ ಏ 22 ರಂದು ಜನಾಕ್ರೋಶ ಯಾತ್ರೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , 19- ಭಾರತೀಯ ಜನತಾ ಪಕ್ಷ ಜನರಿಗಾಗಿ ದುಬಾರಿ ದುನಿಯಾದ ಅರಿವು ಮುಡಿಸಲು ರಾಜ್ಯಾದ್ಯಂತ ಭಾರಿ ಜನ ಬೆಂಬಲ ಕೊಪ್ಪಳದಲ್ಲಿ ಇದೇ 22ರಂದು ಜರುಗಲಿದೆ ಎಂದು ವಿ ಪ ಸದದ್ಯ ಕೆ ಎಸ್ ನವೀನ ಹೇಳಿದರು.
ಅವರು ಶುಕ್ರವಾರದಂದು ಬಿಜೆಪಿ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಗರಕ್ಕೆ 22ರಂದು ಮಧ್ಯಾಹ್ನ 4ಕ್ಕೆ ಆಗಮಿಸಲಿದ್ದು
ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ತಯಾರಿ ಆರಂಭವಾಗಿದೆ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕು ಹೆಚ್ಚಜನ ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಟನೆ ಅಶೋಕವೃತ್ತದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಜರುಗಲಿದೆ ರಾಜ್ಯಾದ್ಯಕ್ಷರಾ ವಿಜಯೇಂದ್ರ , ವಿರೋಧ ಪಕ್ಷ ನಾಕರಾದ ಆರ್ ಅಶೋಕ ಸೇರಿದಂತೆ ಅನೇಕ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ.
ದೇಶದಲ್ಲಿ ದುಬಾರಿ ರಾಜ್ಯ ಕರ್ನಾಟಕವಾಗಿದೆ,ಹೆಚ್ಚು ಹಣ ದುಬ್ಬರ ಇರುವ ರಾಜ್ಯ, ಹತ್ತು ಮಹಾನಗರದಲ್ಲಿ ಬೆಂಗಳೂರು ದುಬಾರಿ ನಗರ, ಮಹಿಳೆರಿಗೆ ರಕ್ಷಣೆ ಇಲ್ಲಾ ,ರೈತರು ಸಂಕಷ್ಟದಲ್ಲಿದ್ದಾರೆ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
ಬಜೆಟ್ಟ ಅಧಿವೇಶನದಲ್ಲಿ ಕೇವಲ ಒಂದು ಘಂಟೆ ಮಾತ್ರ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿ ಶಾಸಕರಿಗೆ ಮೋಸ‌ ಮಾಡಿದ್ದಾರೆ, ಕಾಂಗ್ರೆಸ್ ಸರ್ಕಾರ ಭಟತನದಿಂದ ವರ್ತಿಸುತ್ತಿದೆ , ಜನಸಾಮಾನ್ಯರ ವಿರೋಧಿ ಸರ್ಕಾರ , ಅದರ ವಿರುದ್ಧ ಜನಜಾಗೃತಿ ನಮ್ಮ ಪಕ್ಷದ ನಡೆಸಿದೆ.
ಈ ಸಂದರ್ಭದಲ್ಲಿ ವಿ ಪ ಸದಸ್ಯ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೆಸಗೂರ, ಮುಖಂಡ ಬಸವರಾಜ ಕ್ಯಾವಟಾರ ,ಮುಖಂಡರಾದ ಚಂದ್ರಶೇಖರ್ ಕವಲೂರ, ಮಹಾಂತೇಶ ಮೈನಳ್ಳಿ , ವೆಂಕಟೇಶ ಹಾಲವರ್ತಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!