IMG-20231030-WA0006

                 ಕಟ್ಟಡ ಕಾರ್ಮಿಕರ ಮಂಡಳಿಯಿಂದ
31 ಜಿಲ್ಲೆಗಳಿಗೆ 310 ಕೋಟಿ ರೂಗಳ ಆರೋಗ್ಯ ತಪಾಸಣೆ                        ಕಾರ್ಯಕ್ರಮ ತಡೆಗೆ ಒತ್ತಾಯಿಸಿ ಧರಣಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 30-  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅವೈಜ್ಞಾನಿಕ ತೀರ್ಮಾನಗಳ ವಿರುದ್ಧ ಅಕ್ಟೋಬರ್ 30, 2023 ಸೋಮವಾರ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿ ರಾಜ್ಯ ಸಮಿತಿ ಕರೆ ನೀಡಿದಂತೆ ಕೊಪ್ಪಳ ಜಿಲ್ಲೆಯಲ್ಲೂ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಘಟಕಗಳಿಂದ ಮನವಿ ಅರ್ಪಿಸಲಾಯಿತು.

ಪ್ರತಿಭಟನಾ ಧರಣಿ ನಡೆಸಿದ ನಂತರ ನೀಡಿದ ಮನವಿ ಪತ್ರದಲ್ಲಿ ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಲವಾರು ರೀತಿಯ ಕಿಟ್‌ಗಳು. ಲ್ಯಾಪ್‌ಟಾಪ್‌ಗಳು. ಟ್ಯಾಬ್‌ಗಳು. ಶಾಲಾ ಕಿಟ್‌ಗಳು. ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ. ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇನ್ನೂ ಮುಂತಾದ ರೀತಿಯಲ್ಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ ಹಣವನ್ನು ಮನಸೋ ಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧವಾಗಿ ಮಂಡಳಿಯು ಬಹು ಕೋಟಿ ಹಗರಣ ನಡೆಸಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಐಟಿಯುಸಿ ಸಂಘಟನೆ ಈಗಾಗಲೇ ಮನವಿ ಸಲ್ಲಿಸಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿಯಾಗಲಿ. ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಿಗೆ ಕಾರ್ಮಿಕ ಮಂತ್ರಿಗಳು ದಿನಾಂಕ : 20-08-2023ರಂದು ಸಭೆ ಕರೆದಾಗ ನಮ್ಮ ಸರ್ಕಾರ ಯಾವುದೇ ಕಿಟ್ ಅಥವಾ ಇತರೆ ವಸ್ತು ರೂಪದಲ್ಲಿ ಈ ಹಿಂದೆ ನೀಡುತ್ತಿದ್ದ ಎಲ್ಲವನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದ್ದರು.
ಇದಾದ ನಂತರ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‌ಟಾಪ್‌ ಖರೀದಿಸಿದ್ದಾರೆ ಮತ್ತು ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಪ್ರತಿ ಜಿಲ್ಲೆಗೆ 33 ಸಾವಿರ ಕಾರ್ಮಿಕರಿಗೆ ತಲಾ 285೦ ರೂ ಗಳಂತೆ ಪ್ರತಿ ಜಿಲ್ಲೆಗೆ 10 ಕೋಟಿಯಂತೆ 31 ಜಿಲ್ಲೆಗೆ 310 ಕೋಟಿ ರೂಗಳನ್ನು ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಮಂಡಳಿಯ ಹಣವನ್ನು ತೆಗೆಯಲಾಗಿದೆ. ಇದನ್ನು 31-08- 2023 ರಲ್ಲಿ ಮುಖ್ಯಮಂತ್ರಿಗಳಿಗೆ ಈ ವಿಷಯದ ಬಗ್ಗೆ ಪತ್ರ ಬರೆದು ಈ ಆರೋಗ್ಯ ತಪಾಸಣೆ ಹಾಗೂ ಲ್ಯಾಪ್‌ಟಾಪ್ ಖರೀದಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಗಿತ್ತು. ಆದರೂ ಮುಖ್ಯಮಂತ್ರಿಗಳು ಸಹ ಇದನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ. ಈಗಾಗಲೇ ತುಮಕೂರು. ರಾಮನಗರ. ಬೆಳಗಾವಿಯಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗಿದ್ದು. ಆರೋಗ್ಯ ತಪಾಸಣೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಡೆಯುವ ಗುಮಾನಿ ಇದೆ. ಕಳೆದ ವರ್ಷ ಫಲಾನುಭವಿಗಳಿಗೆ ಕೇವಲ ಆರೋಗ್ಯ ತಪಾಸಣೆ ನಡೆಸಿ ಕೈತೊಳೆದುಕೊಳ್ಳಲಾಗಿದೆ.
ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಿಖರವಾದ ಫಲಿತಾಂಶ ಲಭ್ಯವಾಗಿಲ್ಲ. ಎಷ್ಟೋ ಜನ ಕಾರ್ಮಿಕರಿಗೆ ಇಲ್ಲದ ಕಾಯಿಲೆಗಳು ಇವೆ ಎಂದು ವರದಿ ನೀಡಿದ ಉದಾಹರಣೆಗಳು ಇವೆ. ಇನ್ನು ಎಷ್ಟೋ ಜನಕ್ಕೆ ಫಲಿತಾಂಶದ ಚೀಟಿಯೂ ಸಿಕ್ಕಿಲ್ಲ.
ನಾವು ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಬೇಡವೆಂದು ಹೇಳುತ್ತಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಮಟ್ಟಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು ಇವೆ. ಜೊತೆಗೆ ಸಹಕಾರಿ. ಉಚಿತ ಚಿಕಿತ್ಸೆಗಳು ಇವೆ. ಮಂಡಳಿ ಇವರ ಜೊತೆ ಸೇರಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಬಹುದು. ಇದಕ್ಕೆ ಸರ್ಕಾರ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಇದಕ್ಕಾಗಿ ಮಂಡಳಿ ಹಣವನ್ನು ಬಳಸುವುದು ಸರಿಯಲ್ಲ. ಕೂಡಲೇ ಈ ಆರೋಗ್ಯ ತಪಾಸಣೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ. ಇದರ ಬಗ್ಗೆ ಕಾರ್ಮಿಕ ಸಚಿವರಿಗೂ ಹಾಗೂ ಮಂಡಳಿಯ ಸಿಇಓ ಅವರ ಗಮನಕ್ಕೂ ತರಲಾಗಿದ್ದು. ಆದರೂ ಇದನ್ನು ಮೀರಿ ಆರೋಗ್ಯ ತಪಾಸಣೆ ನಡೆಸುತ್ತಿರುವುದು ತಡೆದು. ಕಾರ್ಮಿಕರ ಹಕ್ಕಿನ ಹಣ ಪೋಲು ಮಾಡುತ್ತಿರುವುದನ್ನು ಕಡಿವಾಣ ಹಾಕಲು ಒತ್ತಾಯಿಸುತ್ತೇವೆ.

ನಮ್ಮ ಬೇಡಿಕೆಗಳಾದ ಈಗಾಗಲೇ ಆರಂಭಿಸಿರುವ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು.ಬಾಕಿ ಇರುವ ಸುಮಾರು 14 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ವಿಲೇವಾರಿ ಮಾಡಬೇಕು.ನಕಲಿ (ಬೋಗಸ್) ಕಾರ್ಡ್ ತಡೆಯಲು ಕ್ರಮ ಕೈಗೊಳ್ಳಬೇಕು ಮತ್ತು ಮಂಡಳಿ ಅಭಿವೃದ್ಧಿ ಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು.ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಸಂಘಟನೆಯಾದ ಎಐಟಿಯುಸಿಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ರಾಜ್ಯ ಸಮಿತಿ ಸದಸ್ಯ ಹುಲಗಪ್ಪ ಅಕ್ಕಿ ರೊಟ್ಟಿ. ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ.ದಿಡ್ಡಿಕೇರಾ ಬಡಾವಣೆ ಘಟಕದ ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್ ಪೈಲ್ವಾನ್.ಕವಲೂರ್ ಗ್ರಾಮ ಘಟಕದ ಅಧ್ಯಕ್ಷ ಶರಣಯ್ಯ ಅಬ್ಬಿಗೇರಿ ಮಠ.ಮುದುಕಪ್ಪ ಗುಗ್ರಿ.ಶಮಶುದ್ದೀನ್ ಮಕಾಂದಾರ್. ಪಾನಿಶಾ ಮಕಾಂದಾರ್. ಸೈಯ್ಯದ್ ಬಾಷಾ ದೊಡ್ಡಮನಿ.
ತಾಲೂಕಾ ಸಂಚಾಲಕ ರಾಜಾಸಾಬ್ ತಹಶೀಲ್ದಾರ್. ನೂರ್ ಸಾಬ್ ಹೊಸಮನಿ. ಭಾಗ್ಯನಗರದ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ.ರಿ. (ಎಐಟಿಯುಸಿ ಸಂಯೋಜಿತ)ದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ.ನಗರ ಸಂಚಾಲಕ ಜಾಫರ್ ಕುರಿ. ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌಹಾಣ್. ಹೊಸ ಕನಕಪೂರ ಗ್ರಾಮದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರೇಣವ್ವ ಮಲ್ಲಪ್ಪ ಅಡ್ಡದೂಲಿ. ಸಿದ್ದಮ್ಮ. ನಾಗರಾಜ್.ಜಗದೀಶ್ ಕಟ್ಟಿಮನಿ. ಅಮೀರ್ ಬಾಷಾ. ಅಶೋಕ್ ಭಾವಿಮನಿ. ಪ್ರಕಾಶ್ ದೇವರಮನಿ. ನಾಗರಾಜ್ ಮರಿ ಸ್ವಾಮಿ ಭೋವಿ ಮುಂತಾದವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!