1af37502-4a98-4c73-a4c3-90dda47e1f19 (1)

ಡಿ.9ರಂದು ಲೋಕ ಅದಾಲತ್

ಜಿಲ್ಲಾ‌ ಪ್ರಧಾನ ಹಾಗೂ ಸತ್ರ ಯಾಧೀಶರಾದ ಚಂದ್ರಶೇಖರ ಸಿ

ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೨೧- ಜಿಲ್ಲಾ ನ್ಯಾಯಾಲಯದಲ್ಲಿ ಡಿ.9ರಂದು ಲೋಕ ಅದಾಲತ್ ನಡೆಲಿಅದರ ಸದುಪಯೋಗವನ್ನುಸಾವಜನಿಕರು ಪಡೆದುಕೊಳ್ಳುವಂತೆ ಜಿಲ್ಲಾ‌ ಪ್ರಧಾನ ಹಾಗೂ ಸತ್ರ ಯಾಧೀಶರಾದ ಚಂದ್ರಶೇಖರ ಸಿ ಹೇಳಿದರು.

ಅವರು ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಕರಣಗಳು ಶೀಘ್ರವಾಗಿ ವಿಲೇವಾರಿಗೆ ಅದಾಲತ ಆಯೋಜಿಸಲಾಗಿದೆ ಇದರ ಸದುಪಯೋಗ ಸಾರ್ವಜನಿಕರಿಗೆ ಆಗಬೇಕು ಎಂದರು.

ನಮ್ಮ ನ್ಯಾಯಾಲಯದಲ್ಲಿ ಹೆಣ್ಣುಮಕ್ಕಳು ಆಸ್ತಿ ವಿಷಯ ದಾವೆಗಳು ಹೆಚ್ಚು ಬಂದಿವೆ. ಸಂಬಂಧಗಳನ್ನು ಉಳಿಸಿ ಕೊಂಡು ಆಸ್ತಿ ಭಾಗ ಹೆಣ್ಣುಮಕ್ಕಳಿಗೆ ನೀಡುವ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬೇಕು. ಗಂಡಿನಂತೆ ಹೆಣ್ಣಿಗೆ ಅನ ಹಕ್ಕಿದೆ. ಆಸ್ತಿ ಅಥವಾ ಸಮಾನ ರೂಪದಲ್ಲಿ ಹಣ ನೀಡಿದಾಗ ಇತ್ಯರ್ಥ ಆಗಲಿದೆ. ಇಂಥ ಪ್ರಕರಣಗಳನ್ನು ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು.
ಜಿಲ್ಲೆಯಲ್ಲಿಖಾಸಗಿ ಫೈನಾನ್ಸ್ ಕಂಪನಿಗಳು ಹೆಚ್ಚಿವೆ ಹಾಗಾಗಿ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಿವೆ. ಇ ಬಗ್ಗೆ ಅವರವರೇ ಪರಿಹರಿಸಿಕೊಳ್ಳಬೇಕು‌. ಒಟ್ಟಿಗೆ ಅಮೌಂಟ್ ಕಂತಿನ ರೂಪದಲ್ಲಿ ಕಟ್ಟಲು ಅವಕಾಶವಿದೆ. ಅಪಘಾತ ಪರಿಹಾರ ಪ್ರಕರಣಗಳಲ್ಲಿ ಕೆಲವರ ಬಳಿ ಏನೂ ಇರುವುದಿಲ್ಲ. ಅಂಥ ಪ್ರಕರಣಗಳನ್ನು ಅವರವರೇ ಪರಿಹರಿಸಿಕೊಂಡಲ್ಲಿ ಉತ್ತಮ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾ.ದೇವೇಂದ್ರ ಪಂಡಿತ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!