
ಜಾಗೃತ ಮಹಿಳಾ ಸಮಾವೇಶ:
ಭೂದಾನಿ ಹುಚ್ಚಮ್ಮ ಕುಣಿಕೇರಿ ಚಾಲನೆ
ಶಕ್ತಿ ಸಂಚಯ ಜಿಲ್ಲೆಯ ಸಾವಿರಾರು
ಮಹಿಳೆಯರು ಭಾಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ.೦೪- ನಗರದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಸಂಚಯ ಜಾಗೃತ ಮಹಿಳಾ
ಸಮಾವೇಶವನ್ನು ತಾಲೂಕಿನ ಶಿಕ್ಷಣ ಪ್ರೇಮಿ, ಶಾಲೆಗೆ ಭೂ ದಾನ ಮಾಡಿರುವ
ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹುಚ್ಚಮ್ಮ
ಕುಣಿಕೇರಿ ಅವರು ದೀಪ ಬೆಳವಗಿಸುವ ಮೂಲಕ ಉದ್ಘಾಟನೆ ಮಾಡಿ, ಸಮಾವೇಶ
ಯಶಸ್ವಿಗೆ ಶುಭ ಕೊರಿದರು. ನಂತರ ಗದಗಿನ ಕೆಎಲ್‌ಇ ಕಲಾ ಮತ್ತು
ವಾಣಿಜ್ಯ ಮಹಾವಿದ್ಯಾಲಯದ ಸಹಾಯಕು ಉಪನ್ಯಾಸಕಿ ಡಾ|| ವೀಣಾ ವಿಶೇಷ ಉಪನ್ಯಾಶ
ನೀಡಿ ಭಾರತದಲ್ಲಿ ಪುರಾತನ ಕಾಲದಿಂದಲೂ ಮಹಿಳಾ ಶಕ್ತಿಗೆ ಮನ್ನಣೆ ಇದೆ ಎಂದು
ಅಭಿಪ್ರಾಯ ಪಟ್ಟರು.
ಅವರು ಭಾನುವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ
ಹಮ್ಮಿಕೊಂಡಿದ್ದ ಶಕ್ತಿ ಸಂಚಯ ಜಾಗೃತ ಮಹಿಳಾ ಸಮಾವೇಶದಲ್ಲಿ
‘ಭಾರತೀಯ ಚಿಂತನೆಯಲ್ಲಿ ಮಹಿಳೆಯರ ಪಾತ್ರ’ ಕುರಿತು ವಿಶೇಷ ಉಪನ್ಯಾಸ
ನೀಡಿ ಮಾತನಾಡಿದರು. ಪುರಾಣದಿಂದ ಹಿಡಿದು ಇಂದಿನವರೆಗೂ ಭಾರತದಲ್ಲಿ
ಮಹಿಳೆಯರು ತಮ್ಮದೇ ಆದ ಅಗಾದ ಸಾಧನೆ ಮಾಡುತ್ತಾ ಬಂದಿದ್ದಾರೆ. ಆದರೆ
ಭಾರತದಲ್ಲಿ ಪುರುಷ ಪ್ರಧಾನತೆ ಹೆಚ್ಚು ಬಿಂಬಿತವಾಗಿತ್ತು. ಮಹಿಳೆಯರು
ಪುರಷರಂತೆ ಕೇವಲ ಹೊರ ಪ್ರಪಂಚದಲ್ಲಷ್ಟೆ ಕೆಲಸ ಮಾಡಿ ಕುಡಲಿಲ್ಲ.
ಮನೆಯಲ್ಲೂ ಅವರು ಮಕ್ಕಳ ಸಂಸ್ಕಾರ ಮತ್ತು ಕುಟುಂಬ ನಿರ್ವಹಣೆಯ
ಜವಬ್ದಾರಿ ಹೊರಬೇಕಾಗಿದೆ. ಮಹಾಭಾರತ, ರಾಮಾಯಣದಲ್ಲಿ ಮಹಿಳೆಯರು
ಸಾಧನೆ, ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಿದ್ದಾರೆ.
ಈಗಲೂ ಕೂಡಾಮಹಿಳೆ ಮಕ್ಕಳು ಮತ್ತು ಕುಟುಂಬ ನಿರ್ವಹಣೆಯ ಜೊತೆಗೆ
ಸಮಾಜಮುಖಿಯಾಗಿ ಹತ್ತಾರು ರೀತಿಯ ಕಾರ್ಯ ನಿರ್ವಹಿಸುತ್ತಾಳೆ. ಆದರೆ
ಶೊಷಣೆಯಿಂದಾಗಿ ಕೆಲವೊಮ್ಮೆ ಮಹಿಳೆಯರು ಹೊರ ಪ್ರಪಂಚದಲ್ಲಿ
ಗುರುತಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ
ಜಗತ್ತಿನಲ್ಲಿ ಮಹಿಳೆಯರು ಅಗಾದವಾದ ಸಾಧನೆ ಮಾಡುತ್ತಿದ್ದಾರೆ.
ಹಿಂಜರಿಕೆಯಿಲ್ಲದೇ ಮಹಿಳೆಯರು ಮುನ್ನುಗ್ಗಿ ಕೆಲಸ ಮಾಡಬೇಕು. ಅದರಲ್ಲೂ
ಭಾರತದ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಮನ್ನಣೆ ನೀಡಿ ಸಮಾಜಿಕ
ಕಾರ್ಯದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಾಧಕಿಯರು ನಮಗೆ
ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷೆ ಸರ್ವಮಂಗಳ
ಗುರುನಗೌಡ ಪಾಟೀಲ್ ಪ್ರಾಸ್ತವಾಕವಾಗಿ ಮಾತನಾಡಿ, ಪುರಾತನ ಕಾಲದಿಂದಲೂ
ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಇತ್ತೀಚಿಗೆ
ಮಹಿಳೆಯರಲ್ಲಿ ಸಂಕುಚಿತ ಭಾವನೆ ಹೆಚ್ಚುತ್ತಿದೆ. ಇದನ್ನು ಹೊಗಲಾಡಿಸಲು
ಮತ್ತು ಭಾರತ ಸಂಸ್ಕೃತಿ, ಸನಾತನ ಧರ್ಮ ರಕ್ಷಣೆಯಲ್ಲಿ ಮಹಿಳೆಯರು
ವಿಶೇಷ ಗಮನ ಹರಿಸಬೇಕೆಂಬ ಉದ್ದೇಶದಿಂದ ಸಂಘ ಪರಿವಾರದ ಸಂಘಟನೆಗಳ
ಸಹಯೋಗದಲ್ಲಿ ದೇಶಾದ್ಯಂತ ಜಾಗೃತ ಮಹಿಳಾ ಸಮಾವೇಶಗಳನ್ನು
ನಡೆಸಲಾಗುತ್ತಿದೆ. ನಮ್ಮ ಬಳ್ಳಾರಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಾವೇಶ
ಆಯೋಜಿಸಿದ್ದು, ಇಂದಿನ ಈ ಸಮಾವೇಶವನ್ನು ಸಂಪೂರ್ಣ ಮಹಿಳೆಯರು
ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕಿನಿಂದ ವಿವಿಧ ಕ್ಷೇತ್ರದ ಸುಮಾರು
೧೦೦೦ಕ್ಕೂ ಅಧಿಕ ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಇಂದಿನ ಈ
ಸಮಾವೇಶವನ್ನು ನಮ್ಮ ತಾಲೂಕಿನ ಶಿಕ್ಷಣ ಪ್ರೇಮಿಯಾಗಿರುವ ಭೂದಾನಿ
ಹುಚ್ಚಮ್ಮ ಅವರು ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಸಾಮಾಜಿಕ ಕಾರ್ಯ ಮಾಡಲು ಹುಚ್ಚಮ್ಮ ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದರು.
ನಂತರ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು
ಗೋಷ್ಟಿಯಲ್ಲಿ ಬೆಂಗಳೂರಿನ ಪತ್ರಕರ್ತರು ಹಾಗೂ ಸಮಾಜಿಕ
ಕಾರ್ಯಕರ್ತೆ ಶೋಭಾ ಹೆಚ್.ಜಿ ಮಾತನಾಡಿ, ಪುರಾತನ ಕಾಲದಿಂದಲೂ ಭಾರತದಲ್ಲಿ
ಮಹಿಳೆಯರನ್ನು ಸದಾ ಗೌರವಿಸಲಾಗುತ್ತಿದೆ. ಮಹಿಳೆಯರು ಇಂದು ಎಲ್ಲಾ
ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ಸಮಾಜಿಕ, ರಾಜಕೀಯ ಸೇರಿದಂತೆ
ಇನ್ನಿತ ಕ್ಷೇತ್ರದಲ್ಲೂ ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಆದರೆ
ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜವಬ್ದಾರಿ ಇದೆ. ಮಕ್ಕಳು ಮತ್ತು
ಕುಟುಂಬವನ್ನು ನಿರ್ವಹಿಸುವ ಮೂಲಕ ಸಮಾಜಿಕ ಕ್ಷೇತ್ರದಲ್ಲಿ ಸಾಧನೆ
ಮಾಡಬೇಕು. ಮಕ್ಕಳಲ್ಲಿ ಭಾರತೀಯತೆ, ಸನಾತನ ಸಂಸ್ಕೃತಿ, ನೈತಿಕ
ಮೌಲ್ಯದ ಜಾಗೃತಿ ಮೂಡಿಸಬೇಕು. ಕೆವಲ ನಮ್ಮ ಕುಟುಂಬದ ಜವಬ್ದಾರಿಗೆ
ಸಿಮೀತವಾಗದೆ ರಾಷ್ಟç, ಸಮಾಜ ಸೇವೆಯ ಬಗ್ಗೆಯೂ ಜಾಗೃತಿ ಮೂಡಿಸಬೇಕು.
ಈ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಸ್ವಾಗತಿ ಸಮಿತಿ ಕಾರ್ಯಾಧ್ಯಕ್ಷೆ ಲಲಿತಾ ಅಂದಣ್ಣ ಅಗಡಿ,ಉಪಾಧ್ಯಕ್ಷರಾದ ಲಕ್ಷಿ ಚಂದ್ರಶೇಖರ ಸಿ.ವಿ, ಡಾ|| ರಾಧಾ ಕುಲಕರ್ಣಿ, ಶಾಂತಾರಾಯ್ಕರ್, ನ್ಯಾಯವಾದಿ ಸಂಧ್ಯಾ ಮಾದಿನೂರು, ಶಕುಂತಲಾ ಮಾಲೀಪಾಟೀಲ್,
ರತ್ನಕುಮಾರಿ, ಶಿಲ್ಪಾ ಪಾಟೀಲ್, ಮಹಾಲಕ್ಷಿ ಪಾನಘಂಟಿ, ರೇಣುಕಾ ಹುರಳಿ, ಅರ್ಚನಾ
ಅನಂತಮೂತಿ, ಸುಮತಿ ಭಂಡಾರಕರ್, ಗೀತಾ ಮುತ್ತಾಳ, ಸಂಗೀತಾ ಪಾಟೀಲ್,
ಕವಿತಾ ಜೈನ್ ಉಪಸ್ಥಿತರಿದ್ದರು. ಜಿಲ್ಲಾ ಸಂಯೋಜಿಕ ಮಹಾಲಕ್ಷಿö್ಮÃ ಕಂದಾರಿ
ನಿರ್ವಹಿಸಿದರು. ಉದ್ಘಾಟನೆಗು ಮುಂಚೆ ಹೊಸಪೇಟೆಯ ಕವಿತಾಸಿಂಗ ಮಹಿಷಾಸುರ
ಮರ್ದಿನಿ ಕುರಿತು ನೃತ್ಯ ರೂಪಕ ನಡೆಯಿತು. ಕಾರ್ಯಕ್ರಮದ ಮದ್ಯದಲ್ಲಿ
ಚರ್ಚಾಗೋಷ್ಟಿ, ಸಂವಾದ ನಡೆಯಿತು. ಸಮಿತಿಯಿಂದ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತ ಹುಚ್ಚಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.