
ಕೊಪ್ಪಳ ನಗರ ಸಭೆಯಿಂದ ಭರ್ಜರಿ ಕಾರ್ಯಾಚರಣೆ
ಕುವೆಂಪು ನಗರದಲ್ಲಿ ಅಕ್ರಮ ಶೆಡ್ಡಗಳ ತೆರವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೫- ನಗರದ ಕುವೆಂಪು ನಗರದಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿದ್ದ ಜಾಗವನ್ನು ನಗರಸಭೆ ಸಿಬ್ಬಂದಿ ತೆರವು ಮಾಡಲಾಯಿತು.
ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆ ಮಾಡಿದ ನಗರಸಭೆ ಸಿಬಂದಿ ಹೂವಿನಾಳ ರಸ್ತೆಯಲ್ಲಿರುವ ಬಡಾವಣೆಯಲ್ಲಿ ಸಂಜೀವಮೂರ್ತಿ ಚೆನ್ನದಾಸರ ಮತ್ತು ಪ್ರವೀಣ ಕನ್ನಾರಿ ಎಂಬುವರು ಒತ್ತುವರಿ ಮಾಡಿಕೊಂಡು ಶೆಡ್ ಕೂಡ ನಿರ್ಮಿಸಿದ್ದರು. ಅಲ್ಲದೆ ಅದೇ ರಿತಿ ಎಂಟತ್ತು ಜನ ಅದೇ ಬಡಾವಣೆಯಲ್ಲಿ ಶೆಡ್ ಹಾಕಿಕೊಳ್ಳಲು ತಯಾರಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ವಿರೋದ: ಮೊದಲೂ ತೆರವು ಮಾಡಲು ಗುರುವಾರ ಹೋದಾಗ ಹಲವರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಆದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಇದರಿಂದಾಗಿ ಕಾರ್ಯಾಚರಣೆ ಪೂರ್ಣಗೊಂಡಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದ ನಗರಸಭೆ ಸಿಬ್ಬಂದಿ ಅಕ್ರಮ ಶೆಡ್ಗಳನ್ನು ತೆರವು ಮಾಡಲು ಯಶಸ್ವಿ ಯಾಗಿದ್ದರೆ.
ಒತ್ತುವರಿ ಮಾಡಿಕೊಂಡ ಜಾಗವನ್ನು ಖಾಲಿ ಮಾಡಬೇಕು ಎಂದು ಕಳೆದ ತಿಂಗಳೇ ನೋಟಿಸ್ ನೀಡಿದ್ದರೂ ಕೇಳಿರಲಿಲ್ಲ. ಆದ್ದರಿಂದ ಕಾರ್ಯಾಚರಣೆ ನಡೆಸಿದೆವು. ಯಾರೇ ಸರ್ಕಾರಿ ಜಾಗ ಒತ್ತುವರಿ ಮಾಡಿದರೂ ಕ್ರಮ ನಿಶ್ಚಿತ ಎಂದು ನಗರಸಭೆ ಆಯುಕ್ತ ಗಣಪತಿ ಪಾಟೀಲ ಹೇಳಿದರು.