
ಕರುನಾಡ ಬೆಳಗು ಸುದ್ದಿ -ಕೊಪ್ಪಳ . 23 ಮಿತ್ರ ಮಂಡಳಿ ಗಡಿಯಾರ ಕಂಬದ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಶ್ರೀ ದುರ್ಗಾದೇವಿ ಮಂಟಪಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿದರು.
ಈ ಬಾರಿ ಮಿತ್ರ ಮಂಡಳಿಯ ವತಿಯಿಂದ ಕೇದಾರನಾಥ ದೇವಸ್ಥಾನದ ಮಾದರಿಯಲ್ಲಿ ಶ್ರೀ ದುರ್ಗಾದೇವಿ ಮಂಟಪ ಮಾಡಿರುವ ಬಗ್ಗೆ ಮೆಚ್ಚಗು ವ್ಯಕ್ತಪಡಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ದಾಮೋದರ ವಣೇಕರ್,ಉಮೇಶ ಕುರಡೇಕರ್,ಶಿವಕುಮಾರ್ ಸಂಡೂರ, ಮಹೇಶ ಅಂಗಡಿ,ಮಾರುತಿ ಆಪ್ಟೆ,ರಾಜೇಶ ಬೆಳವಣಿಕಿ,ಸೇರಿದಂತೆ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.