ತರಕಾರಿ ವ್ಯಾಪಾರಿ ಮನೆಯಲ್ಲಿ ೪ಲಕ್ಷ ಕಳ್ಳತನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೪- ತರಕಾರಿ ವ್ಯಾಪಾರಿಯೊಬ್ಬರ ಮನೆಯಲ್ಲಿ ನ.28ರಂದು ರಾತ್ರಿ ಮನೆ ಬೀಗ ಒಡೆದ ಕಳ್ಳರು 100 ಗ್ರಾಂ ತೂಕದ ಬಂಗಾರದ ಬಳೆ, ತಾಳಿ, ನೆಕ್ಲೆಸ್, ಸರ, ಉಂಗುರ ಹಾಗೂ 16 ಗ್ರಾಂ ಬೆಳ್ಳಿ ಆಭರಣ ಮತ್ತು 20 ಸಾವಿರ ರೂ. ನಗದು ಕದ್ದು ಪರಾರಿಯಾದ ಘಟನೆ ನಗರ ಠಾಣೆಯಲ್ಲಿ ಜರುಗಿದೆ.
ಕೊಪ್ಪಳ ನಗರದ ಗಾಂಧಿ ವೃತ್ತದ ಬಳಿ ಚನ್ನವ್ವ ಉಪ್ಪಾರ್ ಅವರಿಗೆ ಸೇರಿದ ಮನೆಯಲ್ಲಿ 4 ಲಕ್ಷ ರೂ. ಮೊತ್ತದ 100 ಗ್ರಾಂ ಬಂಗಾರ, 11 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ರೂ. ನಗದು ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮನೆ ಮಾಲಿಕರ ಅತ್ತೆ ಮರಣ ಹೊಂದಿದ ಕಾರಣ ಮೂರು ತಿಂಗಳು ಮನೆ ಬಿಡಬೇಕೆಂಬ ಕಾರಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು,ಮನೆಗೆ ಹೋಗಿ, ಬರುವುದು ಮಾಡಿದರೂ ರಾತ್ರಿ ಕುಟುಂಬ ಸದಸ್ಯರಾರು ಉಳಿಯುತ್ತಿರಲಿಲ್ಲ ಎನ್ನಲಾಗಿದೆ. ಈ ಪ್ರಕರಣ ಕೊಪ್ಪಳ ನಗರ ಠಾಣೆಯಲ್ಲಿ ದಾಕಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.