ಬಸವನಗರ ; ಮನೆ ಕಳ್ಳತನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ನಗರದ ಬಸವ ನಗರದಲ್ಲಿ ಕಲ್ಯಾಣಿ ಕಾರ್ಖಾನೆಯ ಉದ್ಯೋಗಿ ಪಾಂಡುರಂಗ ಅಗ್ನಿ ಹೋತ್ರಿ ಮನೆ ಕಳ್ಳತನವಾಗಿದೆ.
ಗುರುವಾರ ತಡ ರಾತ್ರಿ ಮನೆ ಕಳ್ಳತನ ವಾಗಿದೆ ಎನ್ನಲಾಗಿದ್ದು ಪೋಲಿಸರು ಶೋಧನೆ ಮಾಡುತ್ತಿದ್ದಾರೆ.
ಪ್ರಾಥಮಿಕ ಹಂತದ ಮಾಹಿತಿ ಯಂತೆ 25 ಸಾವಿರ ನಗದು. ಮನೆಯಲ್ಲಿ ಇಟ್ಟ ಬಂಗಾರ ಹಾಗೂ ಮನೆ ಹೊರಗಡೆ ಇದ್ದ ದ್ವಿಚಕ್ರ ಹನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮನೆಯ ಮಾಲಿಕರಾದ ಪಾಂಡುರಂಗ ಅಗ್ನಿಹೋತ್ರಿ ರಾತ್ರಿ ಕಾರ್ಖಾನೆಯ ಕೆಲಸಕ್ಕೆ ಹೊಗಿದ್ದರು. ಮನೆಯಲ್ಲಿ ಉಳಿದವರು ಬಂದುಗಳ ಮದುವೆ ಕಾರ್ಯಕ್ರಮಕ್ಕೆ ಹೊದಾಗ ಮನೆ ಕಳ್ಳತನ ವಾಗಿದೆ .
ನಗರ ಠಾಣೆ ಪೋಲಿಸರು ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ತನಿಖೆ ಮುಂದುವರೆದಿದೆ.