
ಆಹಾರ ಮೇಳದಲ್ಲಿ ಚಿಣ್ಣರ ಕಲರವ
ತರವೇಹಾರಿ ತರಕಾರಿ, ಆಹಾರ ಪ್ರದರ್ಶಿಸಿ ಗಮನ ಸೆಳೆದ ವಿದ್ಯಾರ್ಥಿಗಳು
ಮಾಸ್ತಿ ಪಬ್ಲಿಕ್ ಸ್ಕೂಲ್ ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಆಹಾರ ಮೇಳದಲ್ಲಿ ವಿದ್ಯಾರ್ಥಿಗಳ ಕಲರವ ಮೈದೈಳಿಸಿತ್ತು.ವಿದ್ಯಾರ್ಥಿಗಳು ತರವೇಹಾರಿ ಆಹಾರ ತಯಾರಿಸಿಕೊಂಡು ಬಂದು ಮೇಳದಲ್ಲಿ ಪ್ರದರ್ಶಿಸಿದರು.
ಕೆಲ ವಿದ್ಯಾರ್ಥಿಗಳಂತೂ ಪಾಲಕರ ಸಹಕಾರದೊಂದಿಗೆ ತಯಾರಿಸಿದ್ದ ಆಹಾರವನ್ನು ಮಾರಾಟ ಮಾಡಿದರು.
ಒಂದೇಡೆ ತರಕಾರಿ ಮಾರಾಟ, ವಿವಿಧ ಆಹಾರ ಪದಾರ್ಥಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರು.
ಅತ್ತ ವಸ್ತು ಪ್ರದರ್ಶನದಲ್ಲಿಯೂ ವಿಜ್ಞಾನದ ವಿವಿಧ ಮಾದರಿ ಪ್ರದರ್ಶಿಸಿ ವಿದ್ಯಾರ್ಥಿಗಳು ಗಮನ ಸೆಳೆದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದತಾಳಕೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ದೇವಿಂದ್ರ ಜಿರ್ಲಿ ಅವರು,ಇಂದಿನ ಜಮಾನದಲ್ಲಿ ಬರೀ ಓದು, ಓದು ಎಂದು ವಿದ್ಯಾರ್ಥಿಗಳ ಬೆನ್ನ ಹಿಂದೆ ಬಿದ್ದಿದ್ದೇವೆ.
ಆದರೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ಮುಖ್ಯ. ಆ ನಿಟ್ಟಿನಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿರುವ ಮಾಸ್ತಿ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀವ ಗಾಂಧಿ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ವಿನೋದ ಹೂಲಿ ಮಾತನಾಡಿ, ಮಾಸ್ತಿ ಪಬ್ಲಿಕ್ ಸ್ಕೂಲ್ ಸದಾ ವಿನೂತನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ.
ಆಹಾರ ಮೇಳ ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪಾಲ್ಗೊಂಡಿರುವಿಕೆಯನ್ನು ಗಮನಿಸಿದರೇ
ಶಾಲಾ ಆಡಳಿತ ಮಂಡಳಿಯ ಕಾರ್ಯ ತಿಳಿಯುತ್ತಿದೆ.
ಇಂತಹ ಶಾಲೆಗಳನ್ನು ಆದರ್ಶವಾಗಿಟ್ಟುಕೊಂಡು ಉಳಿದ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಮಟ್ಟ ಹೆಚ್ಚಿಸುವುದಕ್ಕೆ ಮಾಸ್ತಿ ಪಬ್ಲಿಕ್ ಸ್ಕೂಲ್ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಅಲ್ಲದೆ, ಆಹಾರ ಮೇಳದಲ್ಲಿ ತರಕಾರಿ ಮಾರುತ್ತಿದ್ದ ವಿದ್ಯಾರ್ಥಿಗಳಿಂದ ಮೆಣಸಿನಕಾಯಿ ಖರೀದಿಸಿದರು.
ಕಾರ್ಯಕ್ರಮದಲ್ಲಿ ಇಸ್ರೋ ಮಾದರಿಯ ರಾಕೆಟ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.
ಕಾರ್ಯಕ್ರಮದ ಪ್ರಾಸ್ತಾವಿಕತೆಯನ್ನು ಶಾಲಾ ಅಧ್ಯಕ್ಷರಾದ ಹುಲಗಪ್ಪ ಕಟ್ಟಿಮನಿ ಮಾತನಾಡಿದರು, ಶಾಲಾ ಶಿಕ್ಷಕಿ ನೇತ್ರಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆಡಳಿತಾಧಿಕಾರಿ ಕಾವೇರಿ ಕಟ್ಟಿಮನಿ ಸ್ವಾಗತಿಸಿದರು.
ಕಾರ್ಯಕ್ರಮದ ಚಾಮರಾಜ ಸವಡಿ, ರಮೇಶ ತುಪ್ಪದ, ಮಂಜುನಾಥ ಅಂಗಡಿ ಸೇರಿ ಶಾಲಾ ಸಿಬ್ಬಂದಿ, ಪಾಲಕರು ಸೇರಿ ಇನ್ನಿತರರು ಇದ್ದರು.