
ಆರ್‌ಟಿಐ ಕಾರ್ಯಕರ್ತರ ವಿರುದ್ಧ ದೂರು
ಎಫ್‌ಐಆರ್ ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,29- ನಗರದ ನಗರಸಭೆಯಲ್ಲಿ ಕೆಲಸ ಮಾಡಯವ ಸರ್ಕಾರಿ ನೌಕರರಿಗೆ ಆರ್ ಟಿ ಐ ಕಾರ್ಯಕರ್ತರು ಕಿರುಕುಳ ನೀಡುತ್ತಿದ್ದಾರೆ ಎಂದು ನೌಕರರು ಪೋಲಿಸ್ ರಿಗೆ ದೂರು ನೀಡಿದ್ದಾರೆ.
ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಇಬ್ಬರು ಆರ್‌ಟಿಐ ಕಾರ್ಯಕರ್ತರ ಮೇಲೆ ಎರಡು ದೂರು ನೀಡಿದ್ದು ಎರಡರಲ್ಲಿ ಒಂದು ದುರಿನಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರು ದಾಖಲು ಃ ನಗರಸಭೆಯ ಕಂದಾಯ ಅಧಿಕಾರಿ ಎಚ್. ವಿರೂಪಣ್ಣ ನೀಡಿದ ದೂರಿನ ಮೇರೆಗೆ ಕೊಪ್ಪಳದ ಹಟಗಾರ ಪೇಟೆಯ ಸೈಯದ್ ಜುಬೇರ್ ಹುಸೇನಿ ಮತ್ತು ಕುವೆಂಪು ನಗರದ ಎಂ.ಡಿ. ಶಫೀಕ್ ಕೊಟ್ಟೂರು ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ .
ದೂರಿನ ವಿವರ : ಎಚ್. ವಿರೂಪಣ್ಣ ನೀಡಿರುವ ದೂರಿನಲ್ಲಿ ಶುಕ್ರವಾರ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾಗ ಸೈಯದ್ ಜುಬೇರ್ ಬಂದು ಮದ್ಯ ವ್ಯಸನಿ, ಮಹಾಭ್ರಷ್ಟ ಎಂದು ಬೈಯ್ದಿದ್ದು ಅಂಗಿ ಹಿಡಿದು ಎಳದಾಡಿ ಬಲಪ್ರಯೋಗ ಮಾಡಲು ಪ್ರಯತ್ನಿಸಿದ್ದಾಗ ನಗರಸಭೆ ಸಿಬ್ಬಂದಿ ಬಂದು ಬಿಡಿಸಿಕೊಂಡಿದ್ದಾರೆ.
ಅಲ್ಲದೆ ನಮ್ಮ ಕಚೇರಿ ಸಿಬ್ಬಂದಿ ನಾಗರತ್ನ ಅವರಿಗೆ ಕಾನೂನುಬಾಹಿರವಾಗಿ ಕೆಲಸ ಮಾಡಿಕೊಡಿ ಎಂದು ಕಿರಿಕಿರಿ ಮಾಡಿದ್ದಾರೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಧುರಾ ಮುಗದೂರ ಅವರಿಗೂ ಅವಾಚ್ಯ ಪದಗಳಿಂದ ಬೈದು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ’ ನಿತ್ಯ ಮಾಹಿತಿ ಹಕ್ಕು ಹೆಸರಿನಲ್ಲಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಪ್ಪಳ ನಗರಸಭೆ ಯಲ್ಲಿ ಕಳೆದ ಒಂದು ರ್ವಷದಿಂದ ನಿಂದ ಕೊಪ್ಪಳ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ.
ನನಗೆ ಹಾಗೂ ಕಚೇರಿ ಸಿಬಂದಿಗೆ ಆರ್‌ಟಿಐ ಕಾರ್ಯಕರ್ತ ಸೈಯದ್ ಜುಬೇರ್ ಹಾಗೂ ಶಫೀಕ್ ಒಂದು ವರ್ಷದಿಂದ ಕಚೇರಿಗೆ ಬಂದು ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ.
ಜೀವ ಬೆದರಿಕೆ ಹಾಕುವುದು, ಸಿಬ್ಬಂದಿಗೆ ಫೋನ್ ಕರೆ ಮಾಡುವುದು, ಕೆಟ್ಟದಾಗಿ ಮೆಸೇಜ್ ಕಳಿಸುವುದು ಮಾಡುತ್ತಿದ್ದಾರೆ ಇದರಿಂದಾಗಿ ಸಾರ್ವಜನಿಕರ ಕೆಲಸ ಮಾಡಲಾಗುತ್ತಿಲ್ಲಾ ಎಂದು ವಿರೂಪಣ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ನಗರಸಭೆ ಸಿಬ್ಬಂದಿ ಹಾಗೂ ಪೌರ ನೌಕರರ ಸಂಘದಿಂದ ಒಟ್ಟು ಎರಡು ದೂರು ನೀಡಿದ್ದು ಅದರಲ್ಲಿ ಒಂದು ಮಾತ್ರ ಎಫ್ ಐ ಆಗಿದೆ . ಪೋಲಿಸ್ ಇಲಾಖೆ ಏನು ಕ್ರಮ ಕೈಗೊಳ್ಳುವುದು ಕಾದು ನೋಡಬೇಕಿದೆ.