IMG-20231031-WA0029

          ಇಂದಿನಿಂದ ೧೧ ದಿನಗಳ ಕಾಲ ಕೊಪ್ಪಳದಲ್ಲಿ

                ಯೋಗ  ಮತ್ತು ಆಧ್ಯಾತ್ಮಿಕ ಪ್ರವಚನ

ಕೊಪ್ಪಳ, ೩೧- ಹಿಮಾಲಯದಲ್ಲಿ ೬ ವರ್ಷಗಳ ಯೋಗ ಸಾಧನೆ ಮಾಡಿರುವ ಪರಮಪೂಜ್ಯ ಶ್ರೀ ನಿರಂಜನ ಸ್ವಾಮಿಗಳು ಇವರಿಂದ ದಿನಾಂಕ:೦೧-೧೧-೨೦೨೩ ರಿಂದ ೧೧-೧೧-೨೦೨೩ ರವರೆಗೆ ೧೧ ದಿನಗಳ ಕಾಲ ಹಿಮಾಲಯನ್ ಧ್ಯಾನಯೋಗ ಮತ್ತು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಕೊಪ್ಪಳ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಯೋಗ ಮತ್ತು ಪ್ರವಚನ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ.


            ಪ್ರತಿದಿನ ಬೆಳಿಗ್ಗೆ ೫:೩೦ ರಿಂದ ೬:೩೦ರವರೆಗೆ ಹಿಮಾಲಯನ್ ಧ್ಯಾನಯೋಗ ಮತ್ತು ಸಂಜೆ ೬:೪೫ ರಿಂದ ೭:೪೫ರವರೆಗೆ ಆಧ್ಯಾತ್ಮಿಕ ಪ್ರವಚನ ಹಾಗೂ ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಯಲಿದೆ. ದಿನಾಂಕ:೦೧-೧೧-೨೦೨೩ರ ಸಂಜೆ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮ.ನಿ.ಪ್ರ.ಸ್ವ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರು ವಹಿಸಲಿದ್ದಾರೆ.

     ಮುಖ್ಯ ಅತಿಥಿಗಳಾಗಿ ಮಾನ್ಯ ಸಂಸದರಾದ ಶ್ರೀ ಸಂಗಣ್ಣ ಕರಡಿಯವರು, ಮಾನ್ಯ ಶಾಸಕರಾದ ಶ್ರೀ ಕೆ.ರಾಘವೇಂದ್ರ ಹಿಟ್ನಾಳರವರು, ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ಪರಿಕ್ಷಿತರಾಜ್ ಅವರು ಆಗಮಿಸಲಿದ್ದಾರೆ. ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರು ಉಪಸ್ಥಿತರಿರುವರು.
          ಆದಕಾರಣ ಸರ್ವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟನೆಯ ಕಾರ್ಯದರ್ಶಿ ರಾಜೇಶ ಸಸಿಮಠ ಮನವಿ ಮಾಡಿದ್ದಾರೆ. ಮಾಹಿತಿಗಾಗಿ ೯೭೪೨೧೯೯೦೫೮ ಗೆ ಸಂಪರ್ಕಿಸುವಂತೆ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!