
ಮಲ್ಲು ಪೂಜಾರ್ ಮೇಲೆ ಹಲ್ಲೆಗೆ ಯತ್ನ : ದೂರು ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 31- ನಗರದ ಕಾಂಗ್ರೆಸ್ ಯುವ ಘಟಕ ಕಾರ್ಯದರ್ಶಿ ಮಲ್ಲು ಪೂಜಾರ್ ಮೇಲೆ ಹಲ್ಲೆಗೆ ಯತ್ನ ಮಾಡಿದ ಘಟನೆ ಜರುಗಿದೆ.
ಸೋಮವಾರ ಬೆಳಿಗ್ಗೆ ವೀರಶೈವ ರುದ್ರ ಭೂಮಿ ಬಳಿ ಅಪರಿಚಿತ ಐದು ಜನರಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಲ್ಲುಪೂಜಾರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮನೆಯಿಂದ ಕಾರ್ ನಲ್ಲಿ ಬರುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ಅಟ್ಟ್ಯಾಕ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಹಲ್ಲೆಗೆ ಯತ್ನಿಸಿದವರನ್ನು ಬಂದಿಸುವಂತೆ ಮಲ್ಲು ಪೂಜಾರ ಒತ್ತಾಯಿಸಿದ್ದಾರೆ.