
ಕುಡಿಯುವ ನೀರು ಸಹಾಯವಾಣಿ ಆರಂಭ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,7- ಕೊಪ್ಪಳ ತಾಲ್ಲೂಕು ಆಡಳಿತದಿಂದ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಹಾಯವಾಣಿಯನ್ನು ಮಾರ್ಚ್ 7ರಿಂದ ಆರಂಭಿಸಲಾಗಿದೆ.
ತಾಲ್ಲೂಕಿನ ಬರ ನಿರ್ವಹಣೆ, ಮೇವಿನ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆಯ ವಿಷಯವಾಗಿ ತಹಶೀಲ್ದಾರ್ ಕಚೇರಿ ಮತ್ತು ಕೊಪ್ಪಳ ತಾಲ್ಲೂಕ ಪಂಚಾಯತಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ಸಹಾಯವಾಣಿ ಸಂಖ್ಯೆ ವಿವರ : ಕೊಪ್ಪಳ ತಹಶೀಲ್ದಾರ ಕಚೇರಿಯ ಸಹಾಯವಾಣಿ ಮೊಬೈಲ್ ಸಂಖ್ಯೆ : 9164258531 ಮತ್ತು 9900324711, ಕೊಪಳ ತಾಲ್ಲೂಕು ಪಂಚಾಯತಿ ಸಹಾಯವಾಣಿ ಮೊಬೈಲ್ ಸಂ:9663435998 ಹಾಗೂ 8722121769 ನ್ನು ಸ್ಥಾಪಿಸಲಾಗಿದೆ.
ಕೊಪ್ಪಳ ತಾಲ್ಲೂಕ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಬರ ಹಾಗೂ ನೀರಿನ ವಿಷಯಕ್ಕಾಗಿ ಸ್ಥಾಪಿಸಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಕೊಪ್ಪಳ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.