
ಕೊಪ್ಪಳ ಜೆಸ್ಕಾಂ : ಏ.7 ರಂದು ವಿದ್ಯುತ್ ವ್ಯತ್ಯಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ಜೆಸ್ಕಾಂ ಕೊಪ್ಪಳ ಉಪ ವಿಭಾಗದಿಂದ ಬೃಹತ್ ಕಾಮಗಾರಿ ವಿಭಾಗ, ಕೊಪ್ಪಳರವರು ರಿಲೇ ವರ್ಕ್ಸ್ ಕೆಲಸ ನಡೆಸುತ್ತಿರುವ ಪ್ರಯುಕ್ತ ಏ.07 ರ ರವಿವಾರದಂದು 110/33/11 ಕೆ.ವಿ ಗಿಣಿಗೇರಾ ಸ್ಟೇಷನ್‌ಗೆ ಒಳಪಡುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು 11 ಕೆ.ವಿ ಎಫ್-8 ಹ್ಯಾಟಿ ಮುಂಡರಗಿ ಫೀಡರಗೆ ಒಳಪಡುವ ಗ್ರಾಮಗಳಾದ ಬೆಳವಿನಾಳ, ಹಾಲವರ್ತಿ, ಬಹದ್ದೂರಬಂಡಿ, ಬಿ.ಹೊಸಳ್ಳಿ, ಚುಕನಕಲ್, ಮುದ್ದಾಬಳ್ಳಿ, ಹಳೆಗೊಂಡಬಾಳ, ಗೊಂಡಬಾಳ, ಹ್ಯಾಟಿ, ಮುಂಡರಗಿ ಮತ್ತು ಮೆಳ್ಳಿಕೇರಿ ಹಾಗೂ ಎಫ್8 ಹ್ಯಾಟಿ ಮುಂಡರಗಿ ಫೀಡರ್, ಎಫ್-9 ಲೇಬಗೇರಿ ಎನ್.ಜೆ.ವೈ ಕಿಡದಾಳ, ಬಸಾಪೂರ, ಹನುಮನಹಳ್ಳಿ, ಸಂಗಾಪೂರ, ಟನಕನಕಲ್, ಲೇಬಗೇರಿ, ಎಲ್.ಹಟ್ಟಿ, ಕಾಮನೂರು ಮತ್ತು ಅಬ್ಬಿಗೇರಿ, ಕೆಂಚನದೋಣಿ ತಾಂಡಾ, ವಿವೇಕಾನಂದನಗರ, ಮೆಡಿಕಲ್ ಕಾಲೇಜ್ ಹತ್ತಿರ, ಖಾದ್ರಿ ಲೇಔಟ್, ಎಫ್-12 ಗಿಣಿಗೇರಾ ಐ.ಪಿ ಫೀಡರ್, ಕಿಡದಾಳ ಮತ್ತು ಬಸಾಪೂರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು.
ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದು, ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂದು ಕೊಪ್ಪಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.