
ಟಿಪ್ಪರ್ ಅಪಘಾತ ಚಾಲಕನಿಗೆ ಗಂಭೀರವಾಗಿ ಗಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ತಾಲೂಕಿನ ಬೇವಿನಹಳ್ಳಿ ಕಿರ್ಲೋಸ್ಕರ್ ಕಾರ್ಖಾನೆ ಎದುರಿಗೆ ಶನಿವಾರ ಸರಣಿ ಅಪಘಾತ ಸಂಭವಿಸಿದ್ದು, ಟಿಪ್ಪರ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಶನಿವಾರ ಈ ಘಟನೆ ಸಂಭವಿಸಿದ್ದು ಹೊಸಪೇಟೆ ಕಡೆಯಿಂದ ಕಬ್ಬಿಣದ ಅದಿರು ಸಾಗಿಸುವ ಮೂರು ಟಿಪ್ಪರ್‌ಗಳ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಮೂರು ಟಿಪ್ಪರ್‌ಗಳ ಚಾಲಕರು ಪರಸ್ಪರ ವಾಹನಗಳನ್ನು ಡಿಕ್ಕಿ ಹೊಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಟಿಪ್ಪರ್ ಲಾರಿಯಲ್ಲಿ ಸಿಲುಕಿದ್ದ ಚಾಲಕನನ್ನು ಕ್ರೇನ್ ಬಳಸಿ ಹೊರತೆಗೆದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.
ಘಟನೆ ವಿಕ್ಷೀಸಿದ ಸ್ಥಳೀಯರ ಹೇಳುವ ಪ್ರಕಾರ ಪೊಲೀಸ್ ಅಥವಾ ಆರ್‌ಟಿಒ ಅಧಿಕಾರಿಗಳು ಬೊಲೆರೊ ವಾಹನ ಅದಿರು ತುಂಬಿದ ಟಿಪ್ಪರ್ ಬೆನ್ನಟ್ಟಿ ಹೊರಟಿದ್ದಾಗ ಟಿಪ್ಪರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಅದರ ಹಿಂದೆ ಬರುತ್ತಿದ್ದ ಇನ್ನೆರೆಡು ಟಿಪ್ಪರ್‌ಗಳು ಡಿಕ್ಕಿ ಹೊಡೆದಿವೆ ಎಂದು ತಿಳಿದು ಬಂದಿದೆ.