
ರಾಜೂರು ಗ್ರಾಮದಲ್ಲಿ ಅಪಘಾತ, ಯುವಕ ಸಾವು
ಕರುನಾಡ ಬೆಳಗು ಸುದ್ದಿ
ಕುಕನೂರು03-ತಾಲೂಕಿನ ರಾಜೂರು ಗ್ರಾಮದ ಬೈ ಪಾಸ್ ರಸ್ತೆ ತಿರುವಿನಲ್ಲಿ ಪಟ್ಟಣದ ಯುವಕ ಮಂಜುನಾಥ ಭೀಕ್ಷಾವತೀಮಠ(32) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಹಾಗೂ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಸ್ಕೂಟಿ ಚಲಾಯಿಸಿಕೊಂಡು ಕುಕನೂರು ಕಡೆ ಬರುತ್ತಿದ್ದ ಸ್ಕೂಟಿ ಸವಾರ ಮಂಜುನಾಥ ಭೀಕ್ಷಾವತೀಮಠ ಗೆ ಟಿಪ್ಪರ್ ಗುದ್ದಿದ ಕಾರಣ ಗಂಭೀರ ಗಾಯಗಳಾಗಿದ್ದವು. ನಂತರ ಚಿಕಿತ್ಸೆಗೆಂದು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಟಿಪ್ಪರ್ ಲಾರಿ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಟೊ.
![]()
ಮೃತ ಮಂಜುನಾಥ ಭೀಕ್ಷಾವತೀಮಠ