IMG-20231119-WA0027

ಭಾರತ ಸೋತರು ಪಟಾಕಿ ಹಚ್ಚಿದ ಕಿಡಿಗೇಡಿಗಳು

ವ್ಯಾಪಕ ಖಂಡನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 19- ರವಿವಾರ ಜರುಗಿದ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ಸೋತು ಆಸ್ಟ್ರೇಲಿಯಾ ಗೆದ್ದಿದ್ದಕ್ಕೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಭಾಗ್ಯನಗರ ಸರ್ಕಲ್‌ನಲ್ಲಿ ಕಿಡಿಗೇಡಿಗಳು ಪಟಾಕಿ ಹಚ್ಚಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ರಾತ್ರಿ ಪಂದ್ಯಾವಳಿ ಮುಗಿದು 1ಗಂಟೆಯ ನಂತರ ಸರ್ಕಲ್ ನಲ್ಲಿ ಜಮಾವಣೆ ಸೇರಿದ ಕೆಲವರು ದಿಢೀರ್ ಎಂದು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಭಾರತ ಪಂದ್ಯಾವಳಿಯಲ್ಲಿ ಸೋತಿದ್ದಕ್ಕೆ ಕೋಟ್ಯಾಂತರ ಕ್ರೀಡಾಭಿಮಾನಿಗಳು ಕಣ್ಣಿರ ಕಡಲಲ್ಲಿ ತೇಲುತ್ತಿದ್ದರೇ ಇವರು ಪಟಾಕಿ ಸಿಡಿಸಿ ಸಂಭ್ರಮಿಸಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದರಲ್ಲದೇ ಅವರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಜತೆಗೆ ಭಾರತದ ನೆಲದಲ್ಲಿನ ಇವರು, ಆಸ್ಟ್ರೇಲಿಯಾ ಗೆದ್ದಿದ್ದಕ್ಕೆ ಪಟಾಕಿ ಸಿಡಿಸಿರುವುದು ಅಚ್ಚರಿಗೆ ಕಾರಣವಾಗಿದೆ ಪಟಾಕಿ ಹಚ್ಚಿದ ಕಿಗೇಡಿಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲಾ.

Leave a Reply

Your email address will not be published. Required fields are marked *

error: Content is protected !!