
ಕೆ.ಆರ್ ಐ.ಡಿ ಎಲ್ ಮಾಜಿ ಹೊರಗುತ್ತಿಗೆ ನೌಕರನ ಮನೆ
ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 31-ನಗರದಲ್ಲಿ ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಹೊರಗುತ್ತಿಗೆ ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ಮನೆ ಮೇಲೆ ಬೆಳಂ ಬೆಳಿಗ್ಗೆ ಲೋಕಾ ದಾಳಿ ಮಾಡಿದೆ.
ಕೊಪ್ಪಳ ನಗರದ ಪ್ರಗತಿ ನಗರದಲ್ಲಿರೋ ಮನೆ ಮೇಲೆ ದಾಳಿ ಮಾಡಿದ್ದು ಕಳೆದ ವಾರವೇ ಇದೇ ಮಾಜಿ ಹೊರಗುತ್ತಿಗೆ ನೌಕರನ ಮೇಲೆ ಲೋಕಾಕ್ಕೆ ಅಧಿಕಾರಿಗಳು ದೂರು ಕೊಟ್ಟಿದ್ದರು.
ಇಲಾಖೆಯಲ್ಲಿ 72 ಕೋಟಿ ಅಕ್ರಮ ಹಿನ್ನಲೆ ZM ಚಿಂಚೋಳಿಕರ್, ಹೊರಗುತ್ತಿಗೆ ನೌಕರ ಕಳಕಪ್ಪ ವಿರುದ್ದ ದೂರು ದಾಖಲು. KRIDL ಅಧಿಕಾರಿಗಳಿಂದಲೇ ದೂರು ದಾಖಲು ಮಾಡಲಾಗಿತ್ತು .
ಚರಂಡಿ ಕುಡಿಯೋ ನೀರು ಕಾಮಗಾರಿಯಲ್ಲಿ ಅಕ್ರಮ ಹಿನ್ನಲೆ ದೂರು ದಾಖಲು. ಕಳೆದ ಕೆಲ ದಿನಗಳ ಹಿಂದೆ ಕೆಲಸದಿಂದ ಹೊರಗುತ್ತಿಗೆ ನೌಕರನ್ನ ತಗೆದಿದು ಹಾಕಿದ್ದರು.
ಕಳಕಪ್ಪ ಅವರು ಅಕ್ರಮವಾಗಿ ಸಾಕಷ್ಟು ಆಸ್ತಿ ಹೊಂದಿದ್ದಾರೆ ಎಂಭ ಆರೋಪಗಳಿವೆ.