
ಕೊಪ್ಪಳ ಜಿಲ್ಲಾ ಬಚಾವೋ ಆಂದೊಲನ ಸಮಿತಿಯಿಂದ
ಮಾರ್ಚ್ 10ರಂದು ಮಾನವ ಸರಪಳಿ ಮುಲಕ ಜಾಗೃತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಮಾರ್ಚ್ 10 ರಂದು ಸೋಮವಾರ ನಗರದಲ್ಲಿ ‘ಮಾಲಿನ್ಯ ನಿಯಂತ್ರಣ ಮಾಡುವ ಪರಿಸರ ಇಲಾಖೆ ಏನು ಮಾಡುತ್ತದೆ’ ಎಂದು ಕೇಳಲು ಮಾನವ ಸರಪಳಿ ಆಂದೋಲನ ಆಯೋಜಿಸಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಉಳಿಸುವವರು, ಪ್ರಜ್ಞಾವಂತರು ಸೇರಿ ಜಾಗೃತಿ ಮೂಡಿಸಲು ಕಾರ್ಖಾನೆ ಬಾಧಿತರೆಡೆಗೆ ನಮ್ಮ ನಡೆ ಹಳ್ಳಿ ಕಡೆ ಘೋಷಣೆಯೊಂದಿಗೆ ಮಾರ್ಚ್ 22-23ರಂದು ಯುವಕರ ಶಿಬಿರ ಆಯೋಜಿಸಿದೆ ಎಂದರು.
ಕಳೆದ 19 ವರ್ಷಗಳ ಹಿಂದೆ ಜಿಲ್ಲೆಗೆ ಆಕ್ರಮಣಕಾರಿಯಾಗಿ ಬಂದ ಬೃಹತ್ ಕಾರ್ಖಾನೆಗಳಿಂದ ಈ ಜಿಲ್ಲೆಯ ಫಲವತ್ತಾದ ನೆಲ, ತುಂಗಭದ್ರಾ ಜಲ ಮತ್ತು ಪರಿಸರ ಕಾಪಾಡಬೇಕೆಂದು ಹಿರಿಯ ಹೋರಾಟಗಾರರು ಮತ್ತು ಕೆಐಎಡಿಬಿ ಭೂಸ್ವಾಧೀನ ಬಾಧಿತ ರೈತರು ಸೇರಿಕೊಂಡು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯನ್ನು ಪಕ್ಷಾತೀತ ವೇದಿಕೆಯಾಗಿ ಕಟ್ಟಿದರು. ಅಂದಿನಿಂದ ತನ್ನ ಹೋರಾಟವನ್ನು ಮುಂದುವರೆಸಿರುವ ಈ ಆಂದೋಲನ, ಬಲ್ನೋಟಾ ಬಿಎಸ್ಪಿಎಲ್ ವಿಸ್ತರಣೆಯ ವಿರುದ್ಧ ಗಟ್ಟಿ ಧ್ವನಿಯೊಂದಿಗೆ ಹೋರಾಟ ದಾಖಲಿಸಿದೆ
ಈ ಸಂದರ್ಭದಲ್ಲಿ ಸಂಚಾಲಕರಾದ ಶರಣು ಗಡ್ಡಿ, ನಜೀರಸಾಬ ಮೂಲಿಮನಿ, ಮಹಾತೇಶ ಕೊತಬಾಳ, ಜ್ಯೋತಿ ಗೊಂಡಬಾಳ ಇತರರು ಇದ್ದರು.