WhatsApp Image 2025-04-10 at 8.08.45 AM(1)

ಮಾಸ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 

ಭಾನುವಾರ ಕೊಪ್ಪಳದಲ್ಲಿ ಜೀ಼ ಕನ್ನಡದ ಮಹಾನಟಿ ಸೀಸನ್ 2 ಆಡಿಷನ್ 

ಕರುನಾಡ ಬೆಳಗು ಸುದ್ದಿ

  ಕೊಪ್ಪಳ, 10- ಇದೇ  ಭಾನುವಾರ ಕೊಪ್ಪಳದಲ್ಲಿ ಜೀ಼ ಕನ್ನಡದ ಮಹಾನಟಿ ಸೀಸನ್ 2 ಆಡಿಷನ್ ಇದೇ ದಿನಾಂಕ 13 ಏಪ್ರಿಲ್ 2025 ಇದೇ ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಗವಿಮಠ ರಸ್ತೆಯಲ್ಲರುವ ಮಾಸ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಿಷನ್ ನಡೆಯಲಿದೆ.

ನಟಿಯಾಗುವ ನಿಮ್ಮ ಕನಸನ್ನು ನನಸಾಗಿಸಲು ಬರ್ತಿದೆ ಮಹಾನಟಿ ಸೀಸನ್ 2 ಆಡಿಷನ್. ಮನಗೆಲ್ಲುವ ಧಾರಾವಾಹಿಗಳು, ಸೂಪರ್ ಹಿಟ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳು ಮತ್ತು ಮನರಂಜಿಸುವ ರಿಯಾಲಿಟಿ ಶೋ ಗಳ ಮೂಲಕ ಕನ್ನಡಿಗರ ಹೃದಯಗೆದ್ದು ನಂಬರ್ 1 ಸ್ಥಾನವನ್ನು ಕಾಯ್ದಿರಿಸಿಕೊಂಡಿರುವ ಜೀ಼ ಕನ್ನಡ ಈಗ ಮತ್ತೊಂದು ಸರ್ಪ್ರೈಸ್ ನ ನಿಮಗಾಗಿ ತಂದಿದೆ. ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು,ಡಾನ್ಸ್ ಕರ್ನಾಟಕ ಡಾನ್ಸ್, ಸರಿಗಮಪ, ಮಹಾನಟಿ ಸೀಸನ್-1 ಮೂಲಕ ಈಗಾಗಲೆ ಸಾಕಷ್ಟು ನಟನಟಿಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ನ ನಿಮಗಾಗಿ ಹೊತ್ತುತರುತ್ತಿದೆ.
ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದ್ದು ,ವಿಜೇತರಾದ ಪ್ರಿಯಾಂಕಾ ಆಚಾರ್ ಬೆಳ್ಳಿತೆರೆಯಲ್ಲಿ ತನ್ನ ಚೊಚ್ಚಲ ನಟನೆಯನ್ನು ಆರಂಭಿಸಿದ್ದಾರೆ. ಜಡ್ಜಸ್ ಗಳಾದ ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು ,ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿ ಮಾತುಗಳು ,ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ಶ್ರೀ ರಮೇಶ್ ಅರವಿಂದ್ ಅವರು ಮಾಸ್ಟರ್ ಕ್ಲಾಸ್ ಮೂಲಕ ನಟಿಯರ ಅಭಿನಯವನ್ನು ತಿದ್ದಿ ತೀಡಿರೋ ಪರಿ ಅಮೋಘ.ಮಹಾನಟಿ ಮತ್ತಷ್ಟು ನಟನೆಯ ಹಸಿವಿರುವವರಿಗಾಗಿ ,ಅಗತ್ಯ ವೇದಿಕೆಯಾಗಿದೆ .
ಚಂದನವನದ ನಟಿ ಆಗಿ ಕನ್ನಡಿಗರ ಮನಕ್ಕೆ ಲಗ್ಗೆ ಇಡಬೇಕೆಂಬ ಕನಸು ಕಾಣುತ್ತಿದ್ದು ವೇದಿಕೆ ಸಿಗದೇ ವಂಚಿತರಾಗಿದ್ದೀರಾ? ಹಾಗಾದರೆ ಮಹಾನಟಿ ಸೀಸನ್-2 ನಿಮಗೆ ತಕ್ಕ ವೇದಿಕೆ. ಮಹಾನಟಿ ಸೀಸನ್-2 ಆಡಿಷನ್ ಗೆ 18 ರಿಂದ 28 ವರುಷದ ಒಳಗಿನ ಕಲಾಸಕ್ತ ಯುವತಿಯರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಆಡಿಷನ್ ನಲ್ಲಿ ಭಾಗವಹಿಸಲು ಬರುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ತರಲು ಮರೆಯದಿರಿ.ದಿನಾಂಕ 13 ಏಪ್ರಿಲ್ 2025 ಇದೇ ಭಾನುವಾರದಂದು ಬೆಳಗ್ಗೆ 9 ಗಂಟೆಗೆ,ಮಾಸ್ತಿ ಆಂಗ್ಲ ಮಾಧ್ಯಮ ಶಾಲೆ,ಗವಿಮಠ ರಸ್ತೆ,ಕೊಪ್ಪಳ.ಇಲ್ಲಿ ಆಡಿಷನ್ ನಡೆಯಲಿದೆ.
ಮತ್ಯಾಕೆ ತಡ? ನಿಮ್ಮ ಕನಸು ನನಸಾಗಿಸಲು ಇರುವ ಸುವರ್ಣಾವಕಾಶ ಮಿಸ್ ಮಾಡಿಕೊಳ್ಳದೇ ಆಡಿಷನ್ ನಲ್ಲಿ ಭಾಗವಹಿಸಿ.
ನಿಮ್ಮಲ್ಲಿ ನಟನೆಯ ಪ್ರತಿಭೆ ಇದ್ದರೆ. ನೀವು 2 ನಿಮಿಷಗಳ ಎರಡು ಭಾವನೆಗಳುಳ್ಳ ನಟನೆಯ ತುಣುಕನ್ನು ಅಭ್ಯಾಸ ಮಾಡಿಕೊಂಡು ಬರಬೇಕು. ಜೀ಼ ಕನ್ನಡ ವಾಹಿನಿಯಲ್ಲಿ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!