
ಕೊಪ್ಪಳ ಲೋಕಾಯುಕ್ತ ಪೊಲೀಸರ ಬರ್ಜರಿ ಕಾರ್ಯಾಚರಣೆ
ಅಧಿಕಾರಿ ರಮೇಶ ಲೋಕಾಯುಕ್ತ ಬಲೆಗೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಲೇಔಟ್ ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘತ ಕೊಪ್ಪಳದಲ್ಲಿ ಜರುಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ಬುಧವಾರ ರಾತ್ರಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಸಿಕ್ಕಿದ್ದಾನೆ.
ಕೊಪ್ಪಳ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಅಧಿಕಾರಿ ರಮೇಶ್ ಬಸವವಗೌಡ, ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಕನೂರ ಮೂಲದ ರವಿಚಂದ್ರ್ ಅನ್ನೋರಿಗೆ ಲೇಔಟ್ ಪರವಾನಗಿ ನೀಡಲು ಎಂಟು ಲಕ್ಷ ರೂಪಾಯಿ ಗೆ ಡಿಮ್ಯಾಂಡ್ ಇಟ್ಟಿದ್ದ ರಮೇಶ್ ತನ್ನ ಖಾಸಗಿ ಸಹಾಯಕ ಮೂಲಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ.
ಬುಧವಾರ ಮೂರು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ಲೋಕಾಯುಕ್ತ ಪಿಐ ಸುನೀಲ್ ಮೇಗಲಮನಿ ನೇತೃತ್ವದಲ್ಲಿ ಕಾರ್ಯಾಚರಣೆ
ರಾಯಚೂರು ಲೋಕಯುಕ್ತ ಎಸ್ಪಿ ಮಾರ್ಗದರ್ಶನ ದಲ್ಲಿ ದಾಳಿ ಮಾಡಿರೋ ಅಧಿಕಾರಿಗಳು ಅಧಿಕಾರಿ ರಮೇಶನನ್ನು ವಶಕ್ಕೆ ಪಡೆದಿದ್ದಾರೆ.