
ಲೋಕ ಕಲ್ಯಾಣಾರ್ಥವಾಗಿ ಜರುಗಿದ ಶ್ರೀ ಗಾಯತ್ರಿ ಹೋಮ ಹಾಗೂ ಶ್ರೀ ಮೃತ್ಯುಂಜಯ ಹೋಮ ಸಂಪನ್ನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ದಿ-೧-೧೨-೨೦೨೩ ರಿಂದ೩-೧೨-೨೦೨೩ ರ ವರೆಗೆ ಲೋಕಕಲ್ಯಾಣಾರ್ಥವಾಗಿ .ಶ್ರೀಗಾಯತ್ರಿ ಹಾಗೂ ಮೃತ್ಯುಂಜಯ ಹೋಮ ಪೂರ್ಣಾಹುತಿ ಮೂಲಕ ಸಂಪನ್ನ ಗೊಂಡಿತು.
ನೇತ್ಋತ್ವವನ್ನು ಹುಬ್ಬಳ್ಳಿಯ ಯತ ಸಮರ್ಥ ಜೋಷಿ .ಹಾಗೂ ಹರಿಭಟ್ ಹೋಮ ಕಾರ್ಯಕ್ರಮ ಜರುಗತು.
ಈ ಕಾರ್ಯಕ್ರಮದಲ್ಲಿ ವಿ.ಕೆ.ಹಂಪಿಹೊಳಿಯವರು ಹಾಗೂ ಡಾ/ಸುಪ್ರತೀಕ್ ಭಟ್ ನೀರಗಾನು ಸಿರಸಿ ಇವರುಗಳ ಪ್ರವಚನ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯರುಗಳಾದ ಚಿಂತಾಮಣಿ ಮಠದ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಚಿಂತಾಮಣಿ ಮಠ ಅಮರಾವತಿ ಹೊಸಪೇಟೆ. ಶ್ರೀಶಿವಪ್ರಕಾಶನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಂಕರಾಚಾರ್ಯಮಠ .ಶ್ರೀಚೈತನ್ಯಾನಂದ ಮಹಾಸ್ವಾಮಿಗಳು ಶ್ರೀ ರಾಮಕೃಷ್ಣ ಆಶ್ರಮ ಕೊಪ್ಪಳ. ಶ್ರೀ ಸುರೇಶ ಪಾಟೀಲ್ ರು ಕರ್ಕಿಹಳ್ಳಿ.ಶ್ರೀ ದತ್ತಾವಧೂತರು.ಹೆಬ್ಬಳ್ಳಿ ಇವರುಗಳು ದಿವ್ಯ ಸಾನಿಧ್ಯವಹಿಸಿರುವರು .
ಈ ಕಾರ್ಯಕ್ರಮವನ್ನು ಸಿಧ್ಧಾಂತಿ ಬಂಧುಗಳು ಹಾಗೂ ಭಗವದ್ ಭಕ್ತರಿಂದ ಕಾರ್ಯಕ್ರಮ ಆಯೋಜಿಸಿದ್ದರು.