
ಮಾರ್ಚ ೭ರಂದು ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಕ್ರೀಡಾಕೂಟ
ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ: ಸರಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಂದ ಮಾರ್ಚ.೭ ರ ಗುರುವಾರ ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ.
ವಿಕಲಚೇತನ ನೌಕರರಿಗೆ ಅವರ ಅಂಗವೈಲತ್ಯೆಗೆ ಅನುಗುಣವಾಗಿ ಕಬಡ್ಡಿ,ಓಟದ ಆಟ,ಕುರ್ಚಿ ಆಟ,ಗುಂಡು ಎಸೆಯುವ ಆಟ ಜೊತೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು,ಕ್ರೀಡಾಕೂಟದಲ್ಲಿ ಭಾಗವಹಿಸವ ನೌಕರರಿಗೆ ಅನ್ಯ ಕಾರ್ಯ ನಿಮಿತ್ಯ ರಜೆ(ಓಓಡಿ) ಸೌಲಭ್ಯವಿರುತ್ತದೆ.
ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ವಿಕಲಚೇತನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮನವಿ ಮಾಡಿದ್ದಾರೆ.