ae1c3d7f-dd0c-41a4-9cac-f0e2c2e467ca (1)

ಕೊಲೆ ಆರೋಪಿಗಳು ಶೀಘ್ರ ಪತ್ತೆಯಾಗಲಿ

 ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿರುವ ಕಳಂಕ ದೂರವಾಗಲಿ : ಗವಿಸಿದ್ದಪ್ಪ ಹಂಡಿ

ಕರುನಾಡ  ಬೆಳಗು ಸುದ್ದಿ

ಕೊಪ್ಪಳ, ೨೦- ಸೌಜನ್ಯ ಕೊಲೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ ಪ್ರಥಿಸಿದರು.

ಅವರು ಇಂದು ನಗರದ ಶ್ರೀ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತಾಡಿದರು.  ಇಂದು ಸೌಜನ್ಯ ಪ್ರಕರಣ ಸಂಬಂಧ ಎಸ್‌ಐಟಿ ಕಲಿಕಾ ತಂಡದವರು ನಡೆಸುತ್ತಿರುವ ತನಿಖೆ ಯಾವುದೇ ಅಡ್ಡಿ ಅಂತ ಆತಂಕಗಳು ಬರದ ಹಾಗೆ ಹಾಗೂ ಧರ್ಮಸ್ಥಳದಲ್ಲಿ ನಿಗೂಢವಾಗಿ ಅಸಹಜ ಸಾವುಗಳು ಹೊಂದಿರುವ ನೂರಾರು ಆತ್ಮಗಳಿಗೆ ನ್ಯಾಯ ಸಿಗುವ ದೃಷ್ಟಿಕೋನದಿಂದ ಮತ್ತು ಅನೇಕ ಕೊಲೆ ಪ್ರಕರಣದಲ್ಲಿ ಕೊಲೆಗಾರರು ಪತ್ತೆಹಚ್ಚದ ಉದಾಹರಣೆ ವೇದವಲ್ಲಿ ಪದ್ಮಲತಾ, ವೈದ್ಯ ಸೌಜನ್ಯ ಹಾಗೂ ಆನೆ ಮಾವುತ ಯಮುನಾ ನಾರಾಯಣ ಕೊಲೆ ಆರೋಪಿಗಳು ಶೀಘ್ರವಾಗಿ ಪತ್ತೆಯಾಗಲಿ ಇದರಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿರುವ ಕಳಂಕ ದೂರವಾಗಲಿ ಎಂದು ಇವತ್ತಿನ ದಿವಸ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾಗೂ ಪ್ರಾಥನೆ ಮಾಡಲಾಯಿತು. ಮುಕ್ತಿ ಸಿಗದ ಆತ್ಮಗಳಿಗೆ ನ್ಯಾಯವನ್ನು ಕುಟುಂಬಕ್ಕೆ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕು ಅಧ್ಯಕ್ಷರು ಹುಸೇನ್ ಬಾಷಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಬೋರಮ್ಮ.ಪ ತಳಗಡೆ ತಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಅಳವಂಡಿ.ದಾಕ್ಷಾಯಿಣಿ ಅಬ್ದುಲ್ ಸಮದ ನದೀಮುಲ್ಲಾ ಕಳಕಪ್ಪ ಕುಕನೂರ ಶಿವಪ್ಪ ಹರಿಜನ ಗುನ್ನಳ್ಳಿ ರವಿ ಹಾದಿ ಗುನ್ನಳ್ಳಿ ನಿಂಗಪ್ಪ ವಿನಾಯಕ ಆಕಾಶ ರಾಜಶೇಖರ ಶಿವು ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!