
ಕ್ಷೇತ್ರದ ಕೆರಿ ತುಂಬಿಸುವ ಯೋಜನೆ ಶಾಸಕ ಬಸವರಾಜ ರಾಯರಡ್ಡಿ
ಅವರ ಪರಿಶ್ರಮ ಫಲ : ವಕ್ತಾರ ಸಂಗಮೇಶ ಗುತ್ತಿ
ಯಲಬುರ್ಗಾ ,5 – ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಿಂದಿನ ಕಾಂಗ್ರೆಸ್ ಸರಕಾರ ಮತ್ತು ಕ್ಷೇತ್ರದ ಎಲ್ಲಾ ಕೆರೆಗಳಿಗೆ ಕೃಷ್ಣಾನದಿ ನೀರು ಹರಿಯುತ್ತಿರುವದು ಶಾಸಕ ಬಸವರಾಜ ರಾಯರಡ್ಡಿ ಅವರ ಸಮಗ್ರ ಪರಿಶ್ರಮದಿಂದ ಎಂದು ಕುಕನೂರು ಕಾಂಗ್ರೆಸ್ ಪಕ್ಷದ ವಕ್ತಾರ ಸಂಗಮೇಶ ಗುತ್ತಿ ಹೇಳಿದರು
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.ಯಲಬುರ್ಗಾ ವಿಧಾನಸಭಾ ಕ್ಷೇತ್ರದ ನೀರಾವರಿ ಬಗ್ಗೆ ಮತ್ತು
ಕೆರೆ ತುಂಬಿಸುವ ಯೋಜನೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಯಾವ ಪಾತ್ರ ಇಲ್ಲ
ಕ್ಷೇತ್ರದಲ್ಲಿ ನೀರಾವರಿ ಮತ್ತು ಕೆರೆ ತುಂಬಿಸುವಯೋಜನೆಯ ಬಗ್ಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ತಾಲೂಕಿನ ಜನತೆಯನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಶಾಸಕ ಬಸವರಾಜ ರಾಯರಡ್ಡಿ ವಿರುದ್ಧ ಕೆರೆ ತುಂಬಿಸುವ ಯೋಜನೆ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಬಿಜೆಪಿಯ ವಿರುದ್ದ ಆರೋಪಿಸಿದರು.
ಇತ್ತೀಚಿಗಷ್ಟೇ ತಾಲೂಕಿನ ತರಲಕಟ್ಟಿ ನಿಲೋಗಲ್ ಕೆರೆಗೆ ಮಾಜಿ ಸಚಿವರು ಬಾಗೀನ ಅರ್ಪಿಸಿರುವುದು ಸ್ವಾಗತ ಮಾಡುತ್ತೇವೆ ಆದರೆ ಹಾಲಪ್ಪ ಆಚಾರ್ ಅವರು ಕೆರೆ ತುಂಬಿಸುವ ಯೋಜನೆಗೆ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕ ರಾಯರೆಡ್ಡಿ ಅವರ ಕೊಡುಗೆ ಇಲ್ಲ ಎಂದು ಆರೋಪ ಮಾಡಿರುವುದು ಸರಿಯಲ್ಲ ಇದು ಸತ್ಯಕ್ಕೆ ದೂರವಾದ ಮಾತು. ಈ ಯೋಜನೆ ಅನುಷ್ಠಾನಕ್ಕಾಗಿ ಬಸವರಾಜ ರಾಯರೆಡ್ಡಿಯವರು ಹಗಲು ಇರುಳು ಪರಿಶ್ರಮ ಮತ್ತು ಸತತ ಪ್ರಯತ್ನ ಫಲದಿಂದ ಕ್ಷೇತ್ರದ ಎಲ್ಲಾ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಯುತ್ತಿದೆ ಎಂದರು.
ಕೆರೆ ತುಂಬಿಸುವ ಯೋಜನೆ ಬಿಜೆಪಿಯವರು ತಾವು ಏನು ಮಾಡಿದ್ದಾರೆ ಎಂಬುದನ್ನು ದಾಖಲೆಗಳಲ್ಲಿ ಬಿಡುಗಡೆಗೊಳಿಸಲಿ ಅದನ್ನು ಬಿಟ್ಟು ಸುಮ್ಮನೆ ರಾಯರಡ್ಡಿ ಅವರು ವಿರುದ್ಧ ಅಪ್ರಚಾರ ಮಾಡುವುದನ್ನು ಬಿಡಬೇಕು. ಈ ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೆ ತರುವದಕ್ಕೆ ಬಸವರಾಜ ರಾಯರಡ್ಡಿ ಅವರ ಪ್ರಮುಖ ಪಾತ್ರ ಮತ್ತು ಅಪಾರವಾದ ಕೊಡುಗೆಯಿದೆ ಕಳೆದ 5 ವರ್ಷಗಳಿಂದಲೂ ಬಸವರಾಜ ರಾಯರೆಡ್ಡಿ ಅವರ ನೇತೃತ್ವದಲ್ಲಿ ನೀರಾವರಿ ಮತ್ತು ಕೆರೆ ತುಂಬಿಸುವ ವಿಚಾರಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಮತ್ತು ರಾಯಡ್ಡಿಯವರ ಪ್ರಯತ್ನದ ಕುರಿತು ಎಲ್ಲ ಅಗತ್ಯ ದಾಖಲಾತಿಗಳನ್ನು ಪುಸ್ತಕದ ಮುಖಾಂತರ ಕ್ಷೇತ್ರದಲ್ಲಿ ಎಲ್ಲಾ ಮನೆ ಮನೆಗೂ ಮಾಹಿತಿಯನ್ನು ಹಂಚಿದ್ದೇವೆ.
ಈ ಯೋಜನೆಗೆ ಸಂಬಂಧಪಟ್ಟ ಯಾವ ಪೂರಕ ದಾಖಲೆಗಳನ್ನು ಬಿಜೆಪಿಯವರು ಜನತೆಗೆ ನೀಡಿಲ್ಲ, ಇದನ್ನು ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾ ಹೊರಟಿದ್ದಾರೆ ಇದನ್ನುಕ್ಷೇತ್ರ ಜನತೆ ನಂಬುವುದಿಲ್ಲ ಇನ್ನಾದರೂ ಅರ್ಥ ಮಾಡಿಕೊಂಡು ಸುಮ್ಮನೆ ಇರಬೇಕು ಸುಳ್ಳು ಆರೋಪ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಎಂದರು.ತುಂಗಭದ್ರ ನದಿಯಿಂದ ಕೆರೆ ತುಂಬಿಸುವ ಯೋಜನೆ ಈ ಹಿಂದೆ ಆರಂಭವಾಗಿತ್ತು ಟೆಂಡರ್ ಪ್ರಕ್ರಿಯ ಪೂರ್ಣಗೊಂಡರು ಬಿಜೆಪಿ ಸರ್ಕಾರದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಮಾಜಿ ಸಚಿವರು ಮನಸ್ಸು ಮಾಡಿಲ್ಲ ಎನ್ನುವುದು ಎತ್ತಿ ತೋರಿಸುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ ಕಿತಿ೯ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಸಲುತ್ತದೆ ಇಂಜಿನಿಯರಿಂಗ್ ಕಾಲೇಜು. ಐಟಿಐ. ಅತಿ ಹೆಚ್ಚುಮೂರಾಜಿ೯ ದೇಸಾಯಿ ವಸತಿ ಶಾಲೆ ಕಿತ್ತೋರ ರಾಣಿ ಚನ್ನಮ್ಮ ವಸತಿ ಶಾಲೆಗಳು ಅತಿ ಹೆಚ್ಚು ಶಾಲಾ ಕಾಲೇಜುಗಳು ಪಿಜಿ.ಸಂಟರ.. ಗದಗ್-ವಾಡಿ ರೈಲ್ವೆ ಯೋಜನೆ ರಾಷ್ಟ್ರೀಯ ಹೆದ್ದಾರಿ ಪಾಲಿಟೆಕ್ನಿಕ್ ಸಿಸಿ ರಸ್ತೆ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅಭಿವೃದ್ಧಿ ಚಿಂತಕ ಹರಿಕಾರ ರಾಗಿದ್ದಾರೆ ಮತ್ತು ಅವರ ಪರಿಶ್ರಮದಿಂದ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಕೆಲಸ ಮಾಡಿದ್ದಾರೆ. ಮತ್ತು 38 ಕೆರೆಗಳಿಗೆ ತುಂಗಭದ್ರ ನೀರು ತರುವ ಕೆಲಸವನ್ನು ರಾಯರೆಡ್ಡಿ ಮಾಡಲಿದ್ದಾರೆ ಎಂದು ಹೇಳಿದರು
ಬಾಗೀನ ಅರ್ಪಣೆ ಮತ್ತು ಪೌರ ಸನ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾಗಿ ನೇಮಕಕೊಂಡ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರು ಪ್ರಥಮ ಬಾರಿಗೆ ಜ 7 ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಅಂದು ಶಾಸಕರು ಚಿಕ್ಕವಂಕಲಕುಂಟಾ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಕಲ್ಲಭಾವಿ ಮತ್ತು ತರಲಕಟ್ಟಿ ನಿಲೋಗಲ್ ಗ್ರಾಮದ ಕೆರೆಗಳಿಗೆ ಬಾಗೀನ ಅರ್ಪಿಸಲಿದ್ದಾರೆ. ಸಂಜೆ ಯಲಬುರ್ಗಾ – ಕುಕನೂರ ಪಟ್ಟಣದಲ್ಲಿ ಪ.ಪಂ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ , ಪಕ್ಷದ ವಕ್ತಾರ ಡಾ.ಶಿವನಗೌಡ ದಾನರೆಡ್ಡಿ, ಸುಧೀರ್ ಕೂಲ೯ಳ್ಳಿ. ಮಲ್ಲಿಕಾರ್ಜುನ ಜಕ್ಕಲಿ, ಪ ಪಂ ಸದಸ್ಯರಾದ ರೀಯಾಜ್ ಖಾಜಿ, ಹನುಮಂತ ಭಜಂತ್ರಿ, ಚಂದ್ರು ದೇಸಾಯಿ, ಹಂಪಯ್ಯ ಹಿರೇಮಠ ಮತ್ತು ಇತರರು ಭಾಗವಹಿಸಿದ್ದರು