
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,10- ತಾಲೂಕು ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಮೂಲಕ ಅಭಿವೃದ್ಧಿ ಕಾರ್ಯಗಳಯೊಂದಿಗೆ ನಾವು ನೀಡಿದ ಐದು ಪಂಚಾ ಗ್ಯಾರಂಟಿ ಭರವಸೆಗಳ ಈಡೇರಿಸಿದ್ದೇವೆ ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಮ್ಮ ಸರ್ಕಾರ ಇನ್ನು ಹೆಚ್ಚಿನ ಅನುದಾನ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತರಲಾಗುವುದು ಎಂದು ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯ ಪಟ್ಟರು.
ತಾಲೂಕಿನ ಮುದ್ದಟನೂರು ಗ್ರಾಮದಲ್ಲಿ ವಿವೇಕ್ ಯೋಜನೆ ಅಡಿಯಲ್ಲಿ ನೂತನ ಎರಡು ಕೋಠಡಿಗಳ ಉದ್ಘಾಟನೆ, ಮಣ್ಣೂರು ಸೂಗೂರು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ, ಹೊಸ ಚೆನ್ನಪಟ್ಟಣ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನ ಯೋಜನೆ ಅಡಿಯಲ್ಲಿ ಮೆಟಲ್ ರೋಡ್ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ, ಸಿರಿಗೇರಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನ ಅಡಿಯಲ್ಲಿ ಸರ್ಕಾರಿ ಉರ್ದು ಶಾಲೆಯ ಹೆಚ್ಚುವರಿ ಕೊಠಡಿಯ ಕಾಮಗಾರಿ ಪೂಜೆ ನೆರವೇರಿಸಿದ ಅವರು ಮಾತನಾಡುತ್ತಾ ಇತ್ತೀಚಿಗೆ ಬಲಕುಂದಿ ನೂತನ ಶಾಲಾ ಕೋಠಡಿ ಉದ್ಘಾಟನೆ, ಶಾಲಿಗನೂರು ಅಂಗನವಾಡಿ ಕಟ್ಟಡದ ಕಾಮಗಾರಿಗೆ ಅಡಿಗಲ್ಲು, ಹಳೆಕೋಟೆ ಸರ್ಕಾರಿ ಶಾಲೆಯ ಹೆಚ್ಚುವರಿ ಶಾಲಾ ಕೋಠಡಿಗಳು, ಉತ್ತನೂರು ಪ್ರೌಢಶಾಲಾ ನೂತನ ಕೋಠಡಿಗಳು, ತೆಕ್ಕಲಕೋಟೆ ಪ್ರಾಥಮಿಕ ಶಾಲೆಯ ಕೋಠಡಿಗಳಿಗೆ ಶಂಕು ಸ್ಥಾಪನೆ ಅಡಿಗಲ್ಲು ನೆರವೇರಿಸಿ ಮಾತನಾಡುತ್ತಾ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಮೈಕ್ರೋ ಹಾಗೂ ಮ್ಯಾಕ್ರೋ ಯೋಜನೆಯಲ್ಲಿ ಸಿಸಿ ರಸ್ತೆಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ ಶಾಲಾ ಕೋಠಡಿಗಳ ಹೊಸ ಅಂಗನವಾಡಿ ಕಟ್ಟಡಗಳು ವಿವಿಧ ಕಾಮಗಾರಿಗಳಿಗೆ ಈಗಾಗಲೇ ಶಂಕುಸ್ಥಾಪನೆ ಅಡಿಗಲ್ಲು ನೆರವೇರಿಸುವುದಾಗಿ ಅವರು ನುಡಿದರು.
ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ನನ್ನನ್ನು ಆಶೀರ್ವಾದ ಮಾಡಿದ್ದೀರಿ ಶೈಕ್ಷಣಿಕ ವೈದ್ಯಕೀಯ ಸೇವೆಗಳಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ಮೀಸಗಿರಿಸಲಾಗಿದೆ ಮುಂದೆ ಇನ್ನೂ ಹೆಚ್ಚಿನ ಅನುದಾನ ತರಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಸಿರುಗುಪ್ಪ ತಾಲೂಕಿನ ಯಾವುದೇ ಗ್ರಾಮದಲ್ಲಿ ಇರಲಿ ಯಾವ ಕೆಲಸಗಳು ಆಗಬೇಕು ಎಂಬುದು ಸ್ಥಳೀಯ ಪ್ರತಿನಿಧಿಗಳು ಹಾಗೂ ನಮ್ಮ ಕಾರ್ಯ ಕರ್ತರು ನಮಗೆ ತಿಳಿಸಿದರೆ ಆ ಕೆಲಸಗಳನ್ನು ಕ್ರಮ ಕೈಗೊಂಡು ತಕ್ಷಣವೇ ಮಾಡುವುದಾಗಿ ಭರವಸೆ ಆಯಾ ಗ್ರಾಮಗಳಲ್ಲಿ ನೀಡುತ್ತಿದ್ದರು ಮುದ್ದಟನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರಾದ ಶ್ರೀನಿವಾಸ್ ರಾವ್ ಶಿಕ್ಷಣ ಪ್ರೇಮಿ ಸೈಯದ್ ಮೋಹಿಯುದೀನ್ ಖಾದ್ರಿ ಖಾಜಾವಲಿ ಸಾಬ್ ಪೂಜಾರಿ ಸತ್ಯನಾರಾಯಣ ಅಬ್ದುಲ್ ನಬಿ ಸಾಬ್ ಮುದ್ದಟನೂರ್ ವೆಂಕಟೇಶ್ ಗೌಡ ಎರೀ ಸ್ವಾಮಿ ಹನುಮಯ್ಯ ಪೂಜಾರಿ ನಾಗರಾಜ ಭರತ್ ಕುಮಾರ್ ನಗರಸಭಾ ಸದಸ್ಯರಾದ ಬಿ ವೆಂಕಟೇಶ್ ಎಚ್ ಗಣೇಶ್ ಕೋಟಿ ರೆಡ್ಡಿ ಮತ್ತಿತರರು ಇದ್ದರು.
ಎಮ್ ಸೂಗೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ ಉಪಾಧ್ಯಕ್ಷ ಶಾರದಾ ಕುಬೇರ ಗೌಡ ಗ್ರಾಮ ಪಂಚಾಯತ್ ಸದಸ್ಯರು ಮುಖಂಡರಾದ ಚನ್ನಪಟ್ಟಣ ನಾಗರಾಜ ಕೆ ಸಣ್ಣ ಕರಿಯಪ್ಪ ಪವನ್ ಕುಮಾರ್ ದೇಸಾಯಿ ಗಂಟೆ ಈರಣ್ಣ ಸಿದ್ದರಾಮಯ್ಯ ಸ್ವಾಮಿ ಗುರು ರಾಜಾ ಸ್ವಾಮಿ ಹೆಚ್ ದೊಡ್ಡಬಸಪ್ಪ ತಾಲೂಕ ಪಂಚಾಯತ್ ಎಡಿ ಮನೋಹರ್ ಪಿಡಿಒ ರಮೇಶ್ ಸಾರ್ವಜನಿಕರು ಇದ್ದರು ಹೊಸ ಚೆನ್ನಪಟ್ಟಣ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮುಖಂಡರಾದ ಶ್ರೀನಿವಾಸ್ ರಾವ್ ಸಯ್ಯದ್ ಮೋಹಿಯುದ್ದೀನ್ ಖಾದ್ರಿ ಖಾಜಾವಲಿ ಸಾಬ್ ಅಬ್ದುಲ್ ನಬಿ ಪೂಜಾರಿ ಸತ್ಯನಾರಾಯಣ ವೆಂಕಟೇಶ್ ಗೌಡ ಹಾವಿನಾಳ ಎರಿಸ್ವಾಮಿ ಹನುಮಯ್ಯ ಪೂಜಾರಿ ನಾಗರಾಜ್ ಭರತ್ ಕುಮಾರ್ ನಗರಸಭಾ ಸದಸ್ಯರು ಬಿ ವೆಂಕಟೇಶ್ ಹೆಚ್ ಗಣೇಶ್ ಕೋಟಿ ರೆಡ್ಡಿ ಊರಿನ ಗಣ್ಯರು ಇದ್ದರು.
ಸಿರಿಗೇರಿ ಗ್ರಾಮದಲ್ಲಿ ತೆಕ್ಕ ಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ದ್ಯಾ ವಣ್ಣ ಉಪಾಧ್ಯಕ್ಷೇ ರಾಜಮ್ಮ ಹುಲುಗಪ್ಪ ಸದಸ್ಯರು ಎಸ್ ಡಿ ಎಂ ಸಿ ಅಧ್ಯಕ್ಷ ಶೇಕ್ಷಾವಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರ್ರಪ್ಪ ಶಿಕ್ಷಣ ಪ್ರೇಮಿ ಸೈಯದ್ ಮೋಹಿದೀನ್ ಖಾದ್ರಿ ಏ ಅಬ್ದುಲ್ ನಬಿ ಮುಖಂಡರಾದ ಸಿಎಂ ನಾಗರಾಜ ಸ್ವಾಮಿ ಮಲ್ಲಯ್ಯ ಸ್ವಾಮಿ ಶಂಕ್ರಪ್ಪ ನಾಗೇಂದ್ರಪ್ಪ ರೇಣುಕಪ್ಪ ಎಸ್ಎಂ ಅಡಿವಯ್ಯ ಸ್ವಾಮಿ ಎಸ್ಎಂ ನಾಗರಾಜ ಸ್ವಾಮಿ ವಿ ಮಂಜುನಾಥ ಬಗರ್ ಹುಕುಂ ಸಮಿತಿ ಸದಸ್ಯರಾದ ರೇಷ್ಮಾ ಜಲಾಲಿಪೀರಾ ನಗರಸಭಾ ಸದಸ್ಯರಾದ ಬಿ ವೆಂಕಟೇಶ ಹೆಚ್ ಗಣೇಶ್ ಕೋಟಿ ರೆಡ್ಡಿ ಗ್ರಾಮಸ್ಥರು ಇದ್ದರು.