
ಸಹಕಾರಿ ಸಂಘಗಳ ದಿಂದ ಆರ್ಥಿಕ ನೆರವು ಪಡೆದು
ಸದೃಢರಾಗಿ : ಭುವನೇಶ್ವರ ತಾತ
ಕರುನಾಡ ಬೆಳಗು ಸುದ್ದಿ
ಗಂಗಾವತಿ, ೦೭- ಸೌಹಾರ್ದ ಸಹಕಾರಿ ಸಂಘಗಳ ಮೂಲಕ ಆರ್ಥಿಕ ಸಾಲದ ನೆರವು ಪಡೆದು ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ಸಾಲವನ್ನು ಮರುಪಾವತಿ ಮಾಡುವ ಮೂಲಕ ಆರ್ಥಿಕ ಸದೃಢರಾಗಲು ಸಾಧ್ಯ ಎಂದು ಸುಳೆಕಲ್ ಬ್ರಹ್ಮಮಠದ ಭುವನೇಶ್ವರಿಯ ತಾತನವರು ಹೇಳಿದರು.
ಅವರು ನಗರದ ಶ್ರೀ ಚನ್ನಬಸವ ಸ್ವಾಮಿ ವೃತ್ತದಲ್ಲಿ ನೂತನವಾಗಿ ನಿತ್ಯ ಹೊಯ್ಸಳ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಪಿತಾಮಹ ಸಿದ್ದನಗೌಡ ರಾಮನಗೌಡ ಕಣಿಗಿನಾಳ ಅವರು ಇಡೀ ವಿಶ್ವದಲ್ಲಿ ಸಹಕಾರಿ ಸಂಘವನ್ನು ಪ್ರಥಮವಾಗಿ ಸ್ಥಾಪನೆ ಮಾಡಿ ಒಬ್ಬರು ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎನ್ನುವ ತತ್ವದ ಅಡಿ ಹಣ ಸಂಗ್ರಹ ಮಾಡಿ ಪ್ರತಿಯೊಬ್ಬರ ಕಷ್ಟಗಳಿಗೆ ನೆರವಾಗುವ ಹೊಸ ಮಾರ್ಗವನ್ನು ಕಂಡುಹಿಡಿದರು.
ನಂತರ ಸಹಕಾರಿ ತತ್ವ ವಿಶ್ವದಲ್ಲಿ ಮಹತ್ವ ಪಡೆದಿದ್ದು ಇತ್ತೀಚೆಗೆ ಸೌಹಾರ್ದ ಕಾಯಿದೆ ಬದಲಾವಣೆಯಾಗಿ ಪ್ರತಿ ಗ್ರಾಮ,ನಗರ ,ಪಟ್ಟಣಗಳಲ್ಲಿ ನೂರಾರು ಸೌಹಾರ್ದ ಸಹಕಾರಿಗಳು ತಲೆಯೆತ್ತಿವೆ ಇದರಿಂದ ಜನಸಾಮಾನ್ಯರು, ಸಣ್ಣ ಪುಟ್ಟ ವ್ಯಾಪಾರಿಗಳು ಆರ್ಥಿಕ ನೆರವನ್ನು ಪಡೆದು ಸದೃಢರಾಗುವ ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದಾರೆ ಸಾಲ ಮರುಪಾವತಿ ಮಾಡುವುದರಿಂದ ಇನ್ನೊಬ್ಬರ ಕಷ್ಟಕ್ಕೆ ಈ ಹಣ ನೆರವಾಗುತ್ತದೆ ಆದ್ದರಿಂದ ಸಾಲ ಪಡೆಯುವ ಜೊತೆಗೆ ಮರುಪಾವತಿಯ ಜವಾಬ್ದಾರಿಯನ್ನು ಪ್ರತಿಯೊಬ್ಬ ಗ್ರಾಹಕರು ತೆಗೆದುಕೊಳ್ಳಬೇಕು ಸೌಹಾರ್ದ ಸಹಕಾರಿಯಲ್ಲಿ ಷೇರುದಾರರು ಮತ್ತು ಆಡಳಿತ ಮಂಡಳಿಯವರು ಬಿಗಿ ಕ್ರಮಗಳಿಂದ ಸಾಲ ವಿತರಿಸಬೇಕು. ಸಾಲ ಕೊಡುವಾಗ ಗ್ರಾಹಕರ ಆರ್ಥಿಕ ಪೂರ್ವಪರ ವಿಚಾರ ಮಾಡಬೇಕು. ಸಹಕಾರಿ ಸಂಸ್ಥೆಗಳು ಸಾಲ ಕೊಡುವುದನ್ನು ಮಾತ್ರ ಮಾಡದೆ ಸಾಮಾಜಿಕ ಜವಾಬ್ದಾರಿಗಳು ಸಹ ಮಾಡಬೇಕಾಗುತ್ತದೆ ಎಂದರು.
ಪೂಜ್ಯರಾದ ಗವಿಸಿದ್ದಯ್ಯ ತಾತ,ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮಹದೇವ ದೇವರು, ಸಿದ್ದಯ್ಯ ಸಿದ್ದರಾಮಯ್ಯ ಗುರುವಿನ್, ಮಾಜಿ ಸಂಸದ ಶಿವರಾಮಗೌಡ,ಮಾಜಿ
ಸಚಿವ ಮಲ್ಲಿಕಾರ್ಜುನ್ ನಾಗಪ್ಪ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ಎಂಎಲ್ಸಿ ಎಚ್ .ಆರ್. ಶ್ರೀನಾಥ್,ಕೆಆರ್ ಪಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ,ಚನ್ನವೀರನಗೌಡ ಕೋರಿ,
ಬಿಜೆಪಿ ಮುಖಂಡ ಸಿಂಗನಾಳ ವಿರೂಪಾಕ್ಷಪ್ಪ,ಕೆಲೋಜಿ ಸಂತೋಷ,ಕೆ.ವೆಂಕಟೇಶ, ಹಾಲುಮತ ಕುರುಬ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ,ಸಣ್ಣಕ್ಕಿ ನೀಲಪ್ಪ, ಕೆ.ನಾಗೇಶಪ್ಪ ಮೋರಿ ದುರುಗಪ್ಪ, ಪತ್ರಕರ್ತ ಸೈಯದ್ ಅಲಿ,ಚಕ್ರವರ್ತಿ ನಾಯಕ,ಎಸ್ಟಿ ಈರಪ್ಪ,ನಾಗಲಿಂಗಪ್ಪ ಪತ್ತಾರ, ಫಕೃದ್ದೀನ್ ,ಮಹಾಲಿಂಗಪ್ಪ ಬನ್ನಿಕೊಪ್ಪ,ಸಿಂಗನಾಳ ಕುಮಾರೆಪ್ಪ ಹಾಗೂ ನಿತ್ಯ ಹೊಯ್ಸಳ ಸೌಹಾರ್ದ ಸಹಕಾರಿ ಅಧ್ಯಕ್ಷ ಜೆ.ಲಕ್ಷ್ಮಣಗೌಡ,ಉಪಾಧ್ಯಕ್ಷ ಅಶೋಕ ಗೌಡ ನಿರ್ದೇಶಕರಾದ ಪತ್ರಕರ್ತ ಕೆ.ನಿಂಗಜ್ಜ,ಕೆ.ತಿಮ್ಮಣ್ಣ, ಎಂ.ನೀಲಕಂಠಪ್ಪ,ರಾಜೇಂದ್ರ ನಾಯಕ,ಜಿ.ಮಲ್ಲಪ್ಪ,ಕೆಲೋಜಿ ವೆಂಕಟೇಶ, ಪರಶುರಾಮ ಗೌಡ,ಎಸ್.ಆರ್.ದರ್ಶನ ಒಡೆಯರ್,ಡಾ.ಜೆ.ಎಲ್. ಭರತ್,,ಈ.ಮಧುಸೂದನ್, ಧನಲಕ್ಷ್ಮಿ,ಲಕ್ಷ್ಮೀದೇವಿ, ಹುಲಿಗೆಮ್ಮ ಭೋವಿ ,