
ಇಕ್ಬಾಲ ಅನ್ದಾರಿ ಮನೆಗೆ ಸಿಎಂ ಪುತ್ರ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 08- ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಮಾಜಿ ಶಾಸಕ ಡಾ. ಯತೀಂದ್ರ ಅವರು ಶುಕ್ರವಾರ ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ನಿವಾಸಕ್ಕೆ ಭೇಟಿ ನೀಡಿದರು.
ಜಿಂದಾಲ್ ನಿಲ್ದಾಣದಿಂದ ಸಿಂಧನೂರಿಗೆ ತೆರಳುತ್ತಿದ್ದ ಡಾ. ಯತೀಂದ್ರ ಅವರನ್ನು ಇಕ್ಬಾಲ್ ಅನ್ಸಾರಿ ಪುತ್ರ ಇಮ್ತಿಯಾಜ್ ಅನ್ಸಾರಿ ಇತರರು ಸ್ವಾಗತಿಸಿದರು. ಅನ್ಸಾರಿ ನಿವಾಸದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಡಿ. 9 ರಂದು 29 ನೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಉದ್ಯಮಿ ಇಮ್ತಿಯಾಜ್ ಅನ್ಸಾರಿಯವರಿಗೆ ಡಾ. ಯತೀಂದ್ರ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಮಾಲಿಪಾಟೀಲ್, ನಗರಸಭೆ ಸದಸ್ಯ ಕಾಸೀಂಸಾಬ ಗದ್ವಾಲ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.