
ಗಂಗಾವತಿ : ಎಸ್‌ಡಿ ಪಿಐ ಸಂಘಟನೆಯಿಂದ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5- ನಗರದ ಗಾಂಧಿವೃತ್ತದಲ್ಲಿ ಎಸ್‌ಡಿ ಪಿಐ ಸಂಘಟನೆಯಿAದ ಜೆಡಿಎಸ್ ಶಾಸಕ ರೆವಣ್ಣ ಹಾಗೂ ಸಂಸದ ಪ್ರಜ್ವಲ ರೆವಣ್ಣ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಎಸ್‌ಡಿಪಿಐ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಜಹಿದ ಅಬ್ಬಾಸ ಮಾತನಾಡಿ ಹಾಸನದಲ್ಲಿ ಸಂಸದ ಪ್ರಜ್ವಲ ರೆವಣ್ಣ ಹಾಗೂ ಜೆಡಿಎಸ್ ಶಾಸಕ ಹೆಚ್.ಡಿ.ರೆವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಬಲಿಯಾಗಿರುವ ಹೆಣ್ಣು ಮಕ್ಕಳ ಬಗ್ಗೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಪಕ್ಷವಾಗಲಿ ಪ್ರಧಾನಮಂತ್ರಿ ನರೆಂದ್ರ ಮೋದಿಯವರಾಗಲಿ ಚಕಾರ ವೇತ್ತದೆ ಮೌನವಹಿಸಿರುವುದು ನಾಚಿಕೆಗೇಡಿ ಸಂಗತಿಯಾಗಿದೆ. ಕೂಡಲೇ ಪ್ರಜ್ವಲ ರೆವಣ್ಣ ಹಾಗೂ ಹೆಚ್.ಡಿ ರೆವಣ್ಣ ರನ್ನು ಬಂದಿಸಬೇಕು. ಹುಬ್ಬಳಿಯಲ್ಲಿ ನೇಹಾ ಹತ್ಯೆ ಗೈದವನಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಗಂಗಾವತಿ ಬಂದಗೆ ನಾವು ಬೆಂಬಲಿಸಿದ್ದವು. ಆದರೆ ಸಂಘಪರಿವಾರದ ಶ್ರೀಕಾಂತ ಹೋಸಕೇರಾ ಮುಸ್ಲಿಂ ಸಮಾಜವನ್ನು ಟಾಗೇಟ್ ಮಾಡಿರುವುದು ಖಂಡನೀಯ ಅತಂಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.ಇಲ್ಲದಿದ್ದರೇ ನಾವು ಹೊರಾಟ ಮಾಡುತ್ತವೆ ಎಂದರು.
ತಾಲೂಕ ಅಧ್ಯಕ್ಷ ಫಯಾಜ ಅಹ್ಮದ,ಕಾರ್ಯದರ್ಶಿ ಎಂಡಿ ಅಜರುದ್ದಿನ, ಉಪಾಧ್ಯಕ್ಷ ಮುದ್ದಾಸೀರ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಲ್ತಾಫ್, ನಬಿ, ಖಾಜಾ ,ಜಮಿಲ್ ಆಸಿಫ್, ಮೌಲಾ ನಾಗೇಶನಹಳ್ಳಿ, ಮಹಿಬೂಬ ಚ್ಚೇಪಡಿ ಮುಂತಾದವರು ಉಪಸ್ಥಿತರಿದ್ದರು.