
Rss ವಿರುದ್ಧ ಪೋಸ್ಟ್: ದೂರು ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ಆರ್. ಎಸ್. ಎಸ್ ಕುರಿತು ಅವಹೇಳನಕಾರಿ ಪೂಷ್ಟ್ ಹಾಕಿದ ಹಿನ್ನೆಲೆಯಲ್ಲಿ ಗಂಗಾವತಿ ನಗರ ಠಾಣೆಯಲ್ಲಿ ರವಿವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಾಇದೆ.
ಗಂಗಾವತಿ ನಗರದ ಅಮೀರ್ ಅಮ್ಮು ಎಂಬ ವ್ಯಕ್ತ ಇನ್ಸ್ಟಾಗ್ರಾಂನಲ್ಲಿ ಆರ್ ಎಸ್ಎಸ್ ಸಂಘಟನೆ ಬಗ್ಗೆ ಪೋಸ್ಟ್ ಮಾಡಿದ್ದ ಸಂಘ ಪರಿವಾರವನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ನಲ್ಲಿ ದಾಖಲಿಸಿದ್ದ.
ಇತ್ತೀಚೆಗೆ ಗಂಗಾವತಿಯಲ್ಲಿ ವಯಸ್ಸಾದ ವೃದ್ಧನ ಮೇಲೆ ಯುವಕರು ಹಲ್ಲೆ ಮಾಡಿ ಜೈ ಶ್ರೀರಾಮ್ ಹೇಳಿಸಿ ಹಣ ದೋಚಿದ್ದೀರಾ ಅಂಧ ಮುಸ್ಲಿಂ ವ್ಯಕ್ತಿಗೆ ಕೆಲ ಕಿಡಿಗೇಡಿಗಳು ಜೈ ಶ್ರೀರಾಮ್ ಎಂದು ಹೇಳುವಂತೆ ಹಲ್ಲೆ ಮಾಡಿ ಹಣ ದೋಚಿದ್ದರು ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗುದೆ
ವೃದ್ಧನ ವಿಷಯ ಹಾಗೂ ಫೋಟೋ ಹಾಕಿ ಸಂಘ ಪರಿವಾರ ಜಗತ್ತಿನಲ್ಲಿಯೇ ಅತಿದೊಡ್ಡ ಭಯೋತ್ಪಾದಕ ಸಂಘಟನೆ ಎಂದು ಬರೆದಿದ್ದಾರೆ. ಗಂಗಾವತಿ ಕೋಮು ಸೂಕ್ಷ್ಮ ನಗರವಾಗಿದ್ದು, ಇಂಥ ಪೋಸ್ಟ್ ಗಳಿಂದ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.