
ಗಣಿತಶಾಸ್ತ್ರ ಪಿತಾಮಹ ರಾಮಾನುಜನ್
ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೨೨- ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಒಂದೇ ಬರುತ್ತದೆ ಎಂದು ಪ್ರತಿಪಾದಿಸಿದವರು ಭಾರತ ದೇಶದ ಗಣಿತ ಶಾಸ್ತ್ರ ಮಾಂತ್ರಿಕ ಹಾಗೂ ಗಣಿತ ಶಾಸ್ತ್ರ ಪಿತಾಮಹ ಶ್ರೀನಿವಾಸ ರಾಮಾನುಜನ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಪ್ರಯುಕ್ತ ಹಮ್ಮಿಕೊಂಡಿದ್ದ ರಾಮಾನುಜನ್ ಅವರ 137ನೇ ಜಯಂತಿಯಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿ 1729 ಎಂಬ ಸಂಖ್ಯೆ ಗಣಿತ ಶಾಸ್ತ್ರದಲ್ಲಿ ವಿಶಿಷ್ಟತೆ ಪಡೆದು ಹಾರ್ಡಿ ಮತ್ತು ರಾಮಾನುಜನ್ ಸಂಖ್ಯೆ ಎಂದೇ ಪ್ರಸಿದ್ಧ ಪಡೆದಿದೆ.
ಸುಮಾರು ಮೂರು ನೂರಕ್ಕೂ ಹೆಚ್ಚು ಗಣಿತ ಸೂತ್ರಗಳನ್ನು ಕಂಡುಹಿಡಿದು ವಿಶ್ವ ಮನ್ನಣೆ ಪಡೆದ ಗಣಿತ ಶಾಸ್ತ್ರಜ್ಞರಾಗಿದ್ದಾರೆ.ಅದಕ್ಕಾಗಿ ಇವರನ್ನು ವಿದೇಶದ ಗಣಿತ ತಜ್ಞರಾದ ಹಾರ್ಡಿ ಹಾಗೂ ವಿಠಲ್ ವುಡ್ ಅವರೊಂದಿಗೆ ಹೋಲಿಸಿದ್ದಾರೆ.ಕೇವಲ 32ವರ್ಷ ಜೀವನದಲ್ಲೇ ಇಷ್ಟು ಸಾಧನೆ ಮಾಡಿ ಇಹಲೋಕ ತ್ಯಜಿಸಿದರು. ಆದ್ದರಿಂದ ಅವರ ನೆನಪಿಗಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಗಣಿತ ವಿಷಯವನ್ನು ಕಷ್ಟ ಪಟ್ಟು ಕಲಿಯದೇ ಇಷ್ಟ ಪಟ್ಟು ಕಲಿಯಬೇಕು ಎಂದು ಹೇಳಿದರು.
ಶಿಕ್ಷಕರಾದ ಚನ್ನಮ್ಮ, ಸುಮತಿ, ಶಶಮ್ಮ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ,ವೈಶಾಲಿ, ಶ್ರಾವಂತಿ ಮುಂತಾದವರು ಉಪಸ್ಥಿತರಿದ್ದರು.